ADVERTISEMENT

MBBS: 10,650 ಸೀಟು ಹೆಚ್ಚಳಕ್ಕೆ ಅನುಮತಿ

41 ಹೊಸ ವೈದ್ಯಕೀಯ ಕಾಲೇಜಿಗೆ ಒಪ್ಪಿಗೆ

ಪಿಟಿಐ
Published 19 ಅಕ್ಟೋಬರ್ 2025, 13:28 IST
Last Updated 19 ಅಕ್ಟೋಬರ್ 2025, 13:28 IST
<div class="paragraphs"><p>ಡಾಕ್ಟರ್</p></div>

ಡಾಕ್ಟರ್

   

ನವದೆಹಲಿ (ಪಿಟಿಐ): ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಹೆಚ್ಚುವರಿಯಾಗಿ 10,650 ವೈದ್ಯಕೀಯ ಸೀಟುಗಳು ಮತ್ತು 41 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2024ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ‘ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಸೀಟುಗಳನ್ನು 75 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರ ಭಾಗವಾಗಿ ಎನ್‌ಎಂಸಿ ಹೆಚ್ಚುವರಿಯಾಗಿ 10,650 ಸೀಟುಗಳಿಗೆ ಅನುಮತಿ ನೀಡಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹೊಸದಾಗಿ 41 ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೂ ಅನುಮತಿ ದೊರೆತಿದ್ದು, ಇದರಿಂದ ದೇಶದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 816ಕ್ಕೆ ಏರಲಿದೆ.    

‘ಯು.ಜಿ ಸೀಟುಗಳನ್ನು ಹೆಚ್ಚಿಸಲು ಬಂದಿದ್ದ ಅರ್ಜಿಗಳ ಪೈಕಿ 41 ಸರ್ಕಾರಿ ಮತ್ತು 129 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ (ಒಟ್ಟು 170) 10,650 ಎಂಬಿಬಿಎಸ್‌ನ ಸೀಟುಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಎನ್‌ಎಂಸಿ ಮುಖ್ಯಸ್ಥ ಡಾ. ಅಭಿಜತ್‌ ಶೇಠ್‌ ಮಾಹಿತಿ ನೀಡಿದರು.

ಹೆಚ್ಚುವರಿ ಸೀಟುಗಳಿಂದಾಗಿ ದೇಶದಲ್ಲಿ ಒಟ್ಟಾರೆ ಎಂಬಿಬಿಎಸ್‌ ಸೀಟುಗಳ ಸಂಖ್ಯೆ 1,37,600ಕ್ಕೆ ಏರಿದಂತಾಗಿದೆ ಎಂದು ಅವರು ವಿವರಿಸಿದರು.

‘ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿನ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೋರಿ 3,500 ಅರ್ಜಿಗಳು ಬಂದಿವೆ. ಸುಮಾರು 5,000ದಷ್ಟು ಪಿ.ಜಿ ಸೀಟುಗಳನ್ನು ಹೆಚ್ಚಿಸುವ ಉದ್ದೇಶವಿದೆ. ಅದು ಸಾಧ್ಯವಾದರೆ ದೇಶದಾದ್ಯಂತ ಪಿ.ಜಿ ಸೀಟುಗಳ ಒಟ್ಟಾರೆ ಸಂಖ್ಯೆ 67,000ಕ್ಕೆ ಏರಿಕೆಯಾಗಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.