ADVERTISEMENT

MCD Exit polls: ದೆಹಲಿ ಪಾಲಿಕೆ ಚುನಾವಣೆಯಲ್ಲಿ ಎಎಪಿಗೆ ಭರ್ಜರಿ ಜಯ: ಸಮೀಕ್ಷೆಗಳು

15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ ಎಂದು ಭವಿಷ್ಯ ನುಡಿದ ಸಮೀಕ್ಷೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2022, 13:33 IST
Last Updated 5 ಡಿಸೆಂಬರ್ 2022, 13:33 IST
   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆ (MCD elections) ಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಆಮ್‌ ಆದ್ಮಿ ಪಕ್ಷವು ಸುಮಾರು ಶೇ 50 ರಷ್ಟು ಮತ ಪಡೆಯುವ ಮೂಲಕ ಇದೇ ಮೊದಲ ಬಾರಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಪಡೆಯಲಿದೆ ಎನ್ನುವುದು ಸಮೀಕ್ಷೆಗಳ ಭವಿಷ್ಯ.

ಕಳೆದ 15 ವರ್ಷಗಳಿಂದ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದು, ಈ ಬಾರಿ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಹಿಡಿತ ತಪ್ಪಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.

ADVERTISEMENT

ಡಿಸೆಂಬರ್‌ 4 ರಂದು ದೆಹಲಿ ಪಾಲಿಕೆ ಚುನಾವಣೆಗೆ ಮತದಾನ ನಡೆದಿದ್ದು, ಡಿ. 7 ರಂದು ಫಲಿತಾಂಶ ಹೊರಬೀಳಲಿದೆ.

ಪಾಲಿಕೆಯ ಒಟ್ಟು 250 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.

ಪ್ರಮುಖ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಇಲ್ಲಿವೆ.


ಇಂಡಿಯಾ ಟುಡೆ– ಆ್ಯಕ್ಸಿಸ್‌ ಮೈ ಇಂಡಿಯಾ


ಎಎಪಿ – 149 ರಿಂದ 171 ಸ್ಥಾನ

ಬಿಜೆಪಿ – 69 ರಿಂದ 91 ಸ್ಥಾನ

ಕಾಂಗ್ರೆಸ್‌ – 03 ರಿಂದ 07 ಸ್ಥಾನ

ಇತರರು – 05 ರಿಂದ 09 ಸ್ಥಾನ

****


ಟೈಮ್ಸ್‌ ನೌ ಎಕ್ಸಿಟ್‌ ಪೋಲ್

ಎಎಪಿ – 146 ರಿಂದ 156 ಸ್ಥಾನ

ಬಿಜೆಪಿ – 84 ರಿಂದ 94 ಸ್ಥಾನ

ಕಾಂಗ್ರೆಸ್ – 6 ರಿಂದ 10 ಸ್ಥಾನ

********

ನ್ಯೂಸ್ ಎಕ್ಸ್‌– ಜನ್‌ ಕೀ ಬಾತ್‌

ಎಎಪಿ – 159 ರಿಂದ 175 ಸ್ಥಾನಗಳು

ಬಿಜೆಪಿ– 70 ರಿಂದ 92 ಸ್ಥಾನಗಳು

ಕಾಂಗ್ರೆಸ್‌ – 04 ರಿಂದ 7 ಸ್ಥಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.