ADVERTISEMENT

ಲಖನೌ: ಪತಿ ಮೃತದೇಹ ಕತ್ತರಿಸಿ, ಡ್ರಮ್‌ ಒಳಗೆ ಮುಚ್ಚಿಟ್ಟಿದ್ದ ಪತ್ನಿ

ಪಿಟಿಐ
Published 19 ಮಾರ್ಚ್ 2025, 8:00 IST
Last Updated 19 ಮಾರ್ಚ್ 2025, 8:00 IST
<div class="paragraphs"><p>ಸೌರಭ, ಮುಸ್ಕಾನ್, ಸಾಹಿಲ್</p></div>

ಸೌರಭ, ಮುಸ್ಕಾನ್, ಸಾಹಿಲ್

   

ಲಖನೌ: ಸರಕು ಸಾಗಣೆ ಹಡಗು ಕಂಪನಿ ಯೊಂದರಲ್ಲಿ ಅಧಿಕಾರಿಯಾಗಿದ್ದ ಪತಿಯನ್ನು, ಪ್ರಿಯಕರನ ನೆರವಿನಿಂದ ಪತ್ನಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಡ್ರಮ್‌ವೊಂದ ರಲ್ಲಿ ಇರಿಸಿ ಸಿಮೆಂಟ್‌ನಿಂದ ಪ್ಯಾಕ್‌ಮಾಡ ಲಾಗಿತ್ತು ಎಂದೂ ಆರೋಪಿಸಲಾಗಿದೆ.

ADVERTISEMENT

ಉತ್ತರ ಪ್ರದೇಶದ ಮೀರಠ್‌ನಲ್ಲಿ ಈ ಭೀಕರ ಘಟನೆ ವರದಿಯಾಗಿದೆ. ಸೌರವ್ ಹತ್ಯೆಯಾಗಿರುವ ಅಧಿಕಾರಿ.

ಪ್ರಕರಣಕ್ಕೆ ಸಂಬಂಧಿಸಿ, ಸೌರವ್ ಪತ್ನಿ ಮುಸ್ಕಾನ್‌ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

‘ಸೌರವ್‌ ಅವರನ್ನು ಹತ್ಯೆ ಮಾಡಿದ ನಂತರ, ಮುಸ್ಕಾನ್‌ ಹಾಗೂ ಸಾಹಿಲ್ ಶಿಮ್ಲಾಕ್ಕೆ ತೆರಳಿದ್ದರು. ತಮ್ಮ ಮದುವೆಗೆ ಸಿದ್ಧತೆಯಲ್ಲಿದ್ದರು’ ಎಂದು ತಿಳಿಸಿವೆ.

ಪರಸ್ಪರ ಪ್ರೀತಿಸುತ್ತಿದ್ದ ಸೌರವ್ ಹಾಗೂ ಮುಸ್ಕಾನ್‌, 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳು ಇದ್ದಾಳೆ. ಮಗಳ ಜನ್ಮದಿನಾಚರಣೆಗಾಗಿ ಸೌರವ್, ಫೆಬ್ರುವರಿ 24ರಂದು ಮನೆಗೆ ಬಂದಿದ್ದರು.

‘ಮಾರ್ಚ್ 4ರಂದು ಮುಸ್ಕಾನ್, ನಿದ್ರೆ ಮಾತ್ರೆ ಬೆರೆಸಿದ್ದ ಆಹಾರವನ್ನು ಸೌರವ್ ಅವರಿಗೆ ನೀಡಿದ್ದಳು. ನಿದ್ರೆಗೆ ಜಾರಿದ್ದ ಅವರನ್ನು ಚಾಕುವಿನಿಂದ ಇರಿದು ಮುಸ್ಕಾನ್‌ ಹತ್ಯೆ ಮಾಡಿದ್ದಳು. ಇದಕ್ಕೆ ಸಾಹಿಲ್‌ ನೆರವು ನೀಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೃತದೇಹದ ತುಂಡುಗಳನ್ನು ಇರಿಸಿದ್ದ ಡ್ರಮ್‌ಅನ್ನು ನಿರ್ಜನ ಪ್ರದೇಶ ವೊಂದರಲ್ಲಿ ಬಿಸಾಕಲು ಇಬ್ಬರೂ ಮಂಗಳವಾರ ಪ್ರಯತ್ನಿಸಿದ್ದರು. ಅದು ಭಾರವಾಗಿದ್ದ ಕಾರಣ, ಅವರ ಪ್ರಯತ್ನ ಕೈಗೂಡಿರಲಿಲ್ಲ’.

ಈ ನಡುವೆ, ಸೌರವ್ ತಮ್ಮ ಮೊಬೈಲ್‌ ಕರೆಗಳನ್ನು ಸ್ವೀಕರಿಸದ ಕಾರಣ, ಅವರ ಪಾಲಕರು ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಶೋಧ ಕೈಗೊಂಡಿದ್ದರು.

ಶಿಮ್ಲಾದಿಂದ ವಾಪಸು ಬಂದಿದ್ದ ಮುಸ್ಕಾನ್‌ ಹಾಗೂ ಸಾಹಿಲ್‌ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಅವರು ತಪ್ಪೊಪ್ಪಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.