ಪುಲ್ವಾಮ: ಜಮ್ಮು–ಕಾಶ್ಮೀರದ ತ್ರಾಲ್‌ನಲ್ಲಿ ಇಂದು ಬೆಳಿಗ್ಗೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮೃತ ಉಗ್ರರನ್ನು ಜಂಗೀರ್ ರಫೀಕ್ ವಾನಿ, ರಾಜಾ ಉಮರ್ ಮಕ್ಬೂಲ್ ಭಟ್ ಮತ್ತು ಉಝೈರ್ ಅಮಿನ್ ಭಟ್ ಎಂದು ಗುರುತಿಸಲಾಗಿದೆ. ಇವರು ಅನ್ಸಾರ್ ಘಾಜ್ವಾ ಅಲ್ ಹಿಂದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಉಗ್ರರ ಸುಳಿವಿನ ಮೇರೆಗೆ ಸೇನಾ ಪಡೆಗಳು ಮತ್ತು ಸಿಆರ್‌ಪಿಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.