ADVERTISEMENT

ವಿಗ್ರಹಗಳ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ

ಪಿಟಿಐ
Published 7 ನವೆಂಬರ್ 2022, 11:20 IST
Last Updated 7 ನವೆಂಬರ್ 2022, 11:20 IST
ಮದ್ರಾಸ್ ಹೈಕೋರ್ಟ್: ಸಂಗ್ರಹ ಚಿತ್ರ
ಮದ್ರಾಸ್ ಹೈಕೋರ್ಟ್: ಸಂಗ್ರಹ ಚಿತ್ರ   

ನವದೆಹಲಿ:ಮಾಜಿ ಪೊಲೀಸ್ ಮಹಾನಿರೀಕ್ಷಕ (ವಿಗ್ರಹ ವಿಭಾಗ ) ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಮಾಜಿ ಪೊಲೀಸ್ ಇನ್‌ಸ್ಪೆಕ್ಟರ್ ಸಲ್ಲಿಸಿದ್ದ ಅರ್ಜಿ ಮೇರೆಗೆ ಮದ್ರಾಸ್ ಹೈಕೋರ್ಟ್‌ ಆದೇಶದ ನಂತರ ವಿಗ್ರಹಗಳ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.

ತಮಿಳುನಾಡಿನ ಪೊಲೀಸ್ ಮಹಾನಿರೀಕ್ಷಕ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎ. ಜಿ. ಪೊನ್ ಮಾಣಿಕವೇಲ್ ವಿರುದ್ಧ ನಿವೃತ್ತ ಇನ್‌ಸ್ಪೆಕ್ಟರ್‌ ಖಾದರ್ ಬಾಚ ಮಾಡಿದ್ದ ಆರೋಪಗಳ ಕುರಿತು ಸಿಬಿಐ ತನಿಖೆಗೆ ಜುಲೈ 22 ರಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು.

ಈ ಆದೇಶದ ಆಧಾರದ ಮೇಲೆ, ರಾಜ್ಯ ಪೊಲೀಸರು ದಾಖಲಿಸಿರುವ ಎಫ್ಐಆರ್‌ನ ಮರು ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಇದರಲ್ಲಿ ಬಾಚ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ADVERTISEMENT

ವಿಗ್ರಹ ಕಳವು ಪ್ರಕರಣಗಳ ಪ್ರಮುಖ ಆರೋಪಿ ದೀನದಯಾಳನ್‌ ಜತೆ ಮಾಣಿಕವೇಲ್ ಶಾಮೀಲಾಗಿ, ತಮ್ಮಂತಹ ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡಲು ಪ್ರಾರಂಭಿಸಿದ್ದಾರೆ ಎಂದು ಬಾಚಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಆರೋಪಗಳ ಗಂಭೀರತೆ ಪರಿಗಣಿಸಿದ ನ್ಯಾಯಮೂರ್ತಿ ಜಿ.ಜಯಚಂದ್ರನ್,ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.