ADVERTISEMENT

ಡ್ರಗ್ಸ್ ಜಪ್ತಿಗೆ ನೆರವು: ಇಂಡಿಗೊ ಸಿಬ್ಬಂದಿಗೆ ಬಹುಮಾನ ನೀಡಿದ ಮಿಜೋರಾಂ ಪೊಲೀಸ್‌

ಮ್ಯಾನ್ಮಾರ್‌ ಪ್ರಜೆಗಳಿಂದ ಸಾಗಣೆ ಯತ್ನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 16:27 IST
Last Updated 23 ನವೆಂಬರ್ 2023, 16:27 IST
-
-   

ಗುವಾಹಟಿ: ಇಬ್ಬರು ಮ್ಯಾನ್ಮಾರ್‌ ಪ್ರಜೆಗಳಿಂದ ₹ 25 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ಮಣಿಪುರ ವ್ಯಕ್ತಿಯಿಂದ ಮದ್ದುಗುಂಡುಗಳ ಜಪ್ತಿಗೆ ನೆರವು ನೀಡಿದ್ದ ಇಂಡಿಗೊ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮಿಜೋರಾಂ ಪೊಲೀಸರು ಬಹುಮಾನ ನೀಡಿದ್ದಾರೆ.

ಐಜ್ವಾಲ್‌ನ ಲೆಂಗ್‌ಪುಯಿ ವಿಮಾನನಿಲ್ದಾಣದಲ್ಲಿ ಇಂಡಿಗೊ ಸಂಸ್ಥೆಯ ಭದ್ರತಾ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಎಚ್‌.ಟಿ.ವನಲಾಲ್‌ರುವಾತಿ  ಅವರಿಗೆ ಡಿಜಿಪಿ ಅನಿಲ್‌ ಶುಕ್ಲಾ ಅವರು ಗುರುವಾರ ₹ 5 ಸಾವಿರ ನಗದು ಹಾಗೂ ಪ್ರಶಂಸಾಪತ್ರ ನೀಡಿ, ಗೌರವಿಸಿದ್ದಾರೆ.

ವನಲಾಲ್‌ರುವಾತಿ ಅವರು ಶಂಕಿತ ಡ್ರಗ್ಸ್‌ನ 10.2 ಕೆ.ಜಿ ತೂಕದ 10 ಪಾಕೆಟ್‌ಗಳನ್ನು ಅಕ್ಟೋಬರ್‌ 3ರಂದು ಕೈಗೊಂಡಿದ್ದ ಪರಿಶೀಲನೆ ವೇಳೆ ಪತ್ತೆ ಮಾಡಿದ್ದರು. ಮ್ಯಾನ್ಮಾರ್‌ನ ಇಬ್ಬರು ಮಹಿಳಾ ಪ್ರಯಾಣಿಕರು ಎರಡು ಸೂಟ್‌ಕೇಸ್‌ಗಳಲ್ಲಿ ಈ ಡ್ರಗ್ಸ್‌ ಸಾಗಣೆಗೆ ಯತ್ನಿಸಿದ್ದರು. 

ADVERTISEMENT

ಅಕ್ಟೋಬರ್‌ 6ರಂದು ಮಣಿಪುರದ ಚುರಚಾಂದಪುರದ ವಿಲಿಯಮ್‌ ಎಂಬುವವರ ಬ್ಯಾಗ್‌ ಪರಿಶೀಲನೆ ನಡೆಸಿದ್ದ ವನಲಾಲ್‌ರುವಾತಿ, ಮದ್ದುಗುಂಡು ಪತ್ತೆ ಹಚ್ಚಿದ್ದರು. ನಂತರ ಆರೋಪಿಯನ್ನು ಸೈರಂಗ್ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.