ADVERTISEMENT

ಜಿ–20 ಶೃಂಗಸಭೆ ವೇಳೆ ಆಹ್ವಾನ: ಗಣರಾಜ್ಯೋತ್ಸವಕ್ಕೆ ಜೋ ಬೈಡನ್ ಮುಖ್ಯ ಅತಿಥಿ

ಪಿಟಿಐ
Published 20 ಸೆಪ್ಟೆಂಬರ್ 2023, 16:02 IST
Last Updated 20 ಸೆಪ್ಟೆಂಬರ್ 2023, 16:02 IST
<div class="paragraphs"><p>ಜೋ ಬೈಡನ್</p></div>

ಜೋ ಬೈಡನ್

   

ನವದೆಹಲಿ: ಮುಂಬರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬುಧವಾರ ತಿಳಿಸಿದ್ದಾರೆ. 

ಜಿ–20 ಶೃಂಗಸಭೆ ವೇಳೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಅಮೆರಿಕ ಅಧ್ಯಕ್ಷರಿಗೆ ಈ ಆಹ್ವಾನ ನೀಡಲಾಗಿದೆ ಎಂದಿರುವ ಅವರು, ಇದೇ ಅವಧಿಯಲ್ಲಿ ಕ್ವಾಡ್ ಶೃಂಗ ಏರ್ಪಡಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ADVERTISEMENT

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾರತವು ಪ್ರತಿವರ್ಷವೂ ವಿಶ್ವದ ಗಣ್ಯರನ್ನು ಆಹ್ವಾನಿಸುತ್ತದೆ. ಕೊರೊನಾ ಕಾರಣಕ್ಕೆ 2021 ಮತ್ತು 2022ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರಿಗೆ ಆಹ್ವಾನ ನೀಡಿರಲಿಲ್ಲ. 2020ರಲ್ಲಿ ಬ್ರೆಜಿಲ್‌ನ ಆಗಿನ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರನ್ನು ಆಹ್ವಾನಿಸಲಾಗಿತ್ತು. 2019ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೊಸಾ, 2018ರಲ್ಲಿ ಆಸಿಯಾನ್ ರಾಷ್ಟ್ರಗಳ ಎಲ್ಲ ನಾಯಕರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.