ಜೈಸಲ್ಮೇರ್:ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಜೈಸಲ್ಮೇರ್‌ನಲ್ಲಿರುವ ರಾಮದೇವ್ರ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆಅಲ್ಲಿ ನೆರೆದಿದ್ದವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಕೂಗುವ ಮೂಲಕ ಮುಜುಗರ ಉಂಟುಮಾಡಿದ್ದಾರೆ.
ಗೆಹಲೋತ್ ಅವರು ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆ ವೇಳೆ ಅಲ್ಲಿದ್ದವರು,ಗೆಹಲೋತ್‌ಅಥವಾ ಅವರ ಪಕ್ಷದ (ಕಾಂಗ್ರೆಸ್) ಹೆಸರನ್ನು ಕೂಗದೆ 'ಮೋದಿ, ಮೋದಿ' ಘೋಷಣೆ ಕೂಗಿದ್ದಾರೆ. ಆದಾಗ್ಯೂ,ಇದರಿಂದ ವಿಚಲಿತರಾಗದ ಗೆಹಲೋತ್ ಜನರತ್ತ ಕೈ ಬೀಸುತ್ತಲೇ ಮುಂದೆ ಸಾಗಿದ್ದಾರೆ.
ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, 'ನಮ್ಮ ಗೌರವಾನ್ವಿತ ಪ್ರಧಾನಿ ಮಂತ್ರಿಯವರ ಹೆಸರಿನ ಘೋಷಣೆಗಳ ಸ್ವಾಗತದೊಂದಿಗೆ ಗೆಹಲೋತ್ ಅವರು ರಾಮದೇವ್ರ ದೇವಾಲಯ ಪ್ರವೇಶಿಸಿದ್ದಾರೆ. ಘೋಷಣೆಗಳನ್ನು ಕೂಗುವ ಮೂಲಕ ಭಕ್ತರು ತಮ್ಮ ಆಯ್ಕೆ ಯಾರು ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಕೈ ಬೀಸುವ ಮೂಲಕ ಗೆಹಲೋತ್ ಅವರು ಸ್ವಾಗತ ಸ್ವೀಕರಿಸಿದರು. ಈಗ ಸಿಎಂ ಸಾಹೇಬರು 'ನಾನು ಜನಪ್ರಿಯನಾಗಿದ್ದೇನೆ. ನನ್ನನ್ನು ನೋಡಿ ಜನರು ಘೋಷಣೆಗಳನ್ನು ಕೂಗುತ್ತಾರೆ' ಎಂದು ಹೇಳಿಕೊಳ್ಳಬಹುದು' ಎಂದು ಗೇಲಿ ಮಾಡಿದ್ದಾರೆ.
ತೆಲಂಗಾಣ ಬಿಜೆಪಿ ನಾಯಕ ವಿಷ್ಣು ವರ್ಧನ್ ರೆಡ್ಡಿ ಅವರೂ ಟ್ವಿಟರ್‌ನಲ್ಲಿ ಈ ವಿಡಿಯೊ ಶೇರ್ ಮಾಡಿಕೊಂಡಿದ್ದು, 'ರಾಮದೇವ್ರ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ರಾಹುಲ್ ಗಾಂಧಿಯವರ ವಿಶೇಷ ಮಾರ್ಗದರ್ಶಕ ಅಶೋಕ್ ಗೆಹಲೋತ್ ಅವರನ್ನು ಮೋದಿ-ಮೋದಿ ಘೋಷಣೆಗಳಿಂದ ಸ್ವಾಗತಿಸಲಾಯಿತು' ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.