ಭೂತಾನ್‌ಗೆ ತೆರಳಿದ ಪ್ರಧಾನಿ ಮೋದಿ
– ಪಿಟಿಐ ಚಿತ್ರ
ನವದೆಹಲಿ: ಭೂತಾನ್ ನಾಲ್ಕನೇ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತೆರಳಿದರು.
ಎರಡು ದಿನಗಳ ಈ ಪ್ರವಾಸದಲ್ಲಿ ಪ್ರಧಾನಿ ಮೋದಿ, ಭೂತಾನ್ ದೊರೆ ಜುಗ್ಮೆ ಕೇಶರ್ ನಂಗ್ಯಾಲ್ ವಾಂಗ್‌ಚುಕ್, ಅವರ ತಂದೆಯೂ ಆಗಿರುವ ಪೂರ್ವಾಧಿಕಾರಿ ಸಿಂಗ್ಯೆ ಹಾಗೂ ಪ್ರಧಾನ ಮಂತ್ರಿ ಶೇರಿಂಗ್ ತೋಬ್ಗೆ ಅವರನ್ನು ಭೇಟಿಯಾಗಲಿದ್ದಾರೆ.
‘ನನ್ನ ಈ ಭೇಟಿ ಸ್ನೇಹ ಸಂಬಂಧ ಬಲಗೊಳ್ಳಲಿದೆ ಮತ್ತು ಪ್ರಗತಿ ಹಾಗೂ ಅಭ್ಯುದಯದಲ್ಲಿ ನಮ್ಮ ಜಂಟಿ ಪ್ರಯತ್ನ ಇನ್ನಷ್ಟು ಗಟ್ಟಿಯಾಗಲಿದೆ ಎಂದು ನಾನು ನಂಬಿದ್ದೇನೆ’ ಎಂದು ಪ್ರಧಾನಿ ಪ್ರಯಾಣಕ್ಕೂ ಮುನ್ನ ಹೇಳಿದ್ದಾರೆ.
‘ನಾಲ್ಕನೇ ದೊರೆಯ 70ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಜನರೊಂದಿಗೆ ಪಾಲ್ಗೊಳ್ಳುವುದು ಗೌರವದ ವಿಷಯ’ ಎಂದು ಅವರು ಹೇಳಿದ್ದಾರೆ.
ಪುನತಾಂಗ್ಚು– II ಜಲವಿದ್ಯುತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
‘ಪುನತಾಂಗ್ಚು– II ಜಲವಿದ್ಯುತ್ ಯೋಜನೆ ಉದ್ಘಾಟನೆಗೊಳ್ಳುವ ಮೂಲಕ ಈ ಭೇಟಿಯು ನಮ್ಮ ಇಂಧನ ಪಾಲುದಾರಿಕೆಯಲ್ಲಿ ಮುಖ್ಯ ಮೈಲಿಗಲ್ಲಿಗೂ ಸಾಕ್ಷಿಯಾಗಲಿದೆ’ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.