
ಮೋಹನ್ ಯಾದವ್
–ಪಿಟಿಐ ಚಿತ್ರ
ಭೋಪಾಲ್ (ಪಿಟಿಐ): ‘1984ರಲ್ಲಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕೇಂದ್ರದಿಂದ ಅನಿಲ ದುರಂತ ಸಂಭವಿಸಿ ಸಾವಿರಾರು ಮಂದಿ ಮೃತಪಟ್ಟಿದ್ದರೂ ಆ ಕಂಪನಿಯ ಮಾಲೀಕ ವಾರನ್ ಆ್ಯಂಡರ್ಸನ್‌ಗೆ ಭಾರತ ಬಿಟ್ಟು ಪರಾರಿಯಾಗಲು ಕಾಂಗ್ರೆಸ್ ಪಕ್ಷವೇ ಅವಕಾಶ ಮಾಡಿಕೊಟ್ಟಿತ್ತು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಆರೋಪಿಸಿದ್ದಾರೆ.
ಭಾಗೀರಥಿಪುರ ಸಂತ್ರಸ್ತರನ್ನು ರಾಹುಲ್ ಗಾಂಧಿ ಭೇಟಿಯಾಗಲು ಇಂದೋರ್‌ಗೆ ಬಂದಿಳಿದ ಬೆನ್ನಲ್ಲೇ ಅವರು ತಿರುಗೇಟು ನೀಡಿದ್ದಾರೆ.
‘194ರ ಡಿಸೆಂಬರ್ 2 ಹಾಗೂ 3ರಂದು ಸಂಭವಿಸಿದ ಅನಿಲ ದುರಂತದಲ್ಲಿ ಸಾವಿವಾರು ಮಂದಿ ಮೃತಪಟ್ಟಿದ್ದರೂ ರಾಜ್ಯ ಹಾಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಇದರಿಂದ ಲಕ್ಷಾಂತರ ಮಂದಿ ಜೀವನಪೂರ್ತಿ ಕಾಯಿಲೆಯಿಂದ ನರಳುವಂತಾಯಿತು. ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ಕೈಗಾರಿಕ ದುರಂತದ ಬಳಿಕ ಸಂಸ್ಥೆಯ ಮಾಲೀಕ ಆ್ಯಂಡರ್ಸನ್ ಭಾರತಕ್ಕೆ ಭೇಟಿ ನೀಡಿದ್ದರು. ಆದರೆ ಇಲ್ಲಿನ ಸರ್ಕಾರದ ನೆರವಿನಿಂದ ಮರಳಿ ಅಮೆರಿಕಕ್ಕೆ ತೆರಳಿದ್ದರು. ವಿಚಾರಣೆಗೂ ಹಾಜರಾಗಿರಲಿಲ್ಲ. 92ರ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದರು’ ಎಂದು ನೆನಪಿಸಿದ್ದಾರೆ.
‘ಆ್ಯಂಡರ್ಸನ್ ಪರಾರಿಯಾಗಲು ನೆರವಾಗುವ ಮೂಲಕ ಕಾಂಗ್ರೆಸ್ ದೊಡ್ಡ ಪಾಪದ ಕೆಲಸ ಮಾಡಿತ್ತು. ಅವರು ಪರಾರಿಯಾಗುವಲ್ಲಿ ಕಾಂಗ್ರೆಸ್ ನಾಯಕರ ಪಾತ್ರವೇ ಪ್ರಮುಖವಾಗಿತ್ತು. ಅವರ ಅಜ್ಜಿ ಹಾಗೂ ತಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆದ ದುರಂತದ ಕುರಿತು ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಿ ಸಂಪೂರ್ಣ ಜವಾಬ್ದಾರಿ ಹೊರಬೇಕು’ ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.