ADVERTISEMENT

ಜೂನ್‌ 4ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ; ವಾಡಿಕೆಗಿಂತ ಕಡಿಮೆ ಮಳೆ- ಸ್ಕೈಮೆಟ್

ಏಜೆನ್ಸೀಸ್
Published 14 ಮೇ 2019, 13:46 IST
Last Updated 14 ಮೇ 2019, 13:46 IST
   

ನವದೆಹಲಿ:ನೈಋತ್ಯ ಮುಂಗಾರು ಜೂನ್‌ 4 ರಂದು ಕೇರಳ ಪ್ರವೇಶಿಸುವ ನಿರೀಕ್ಷೆಯಿದೆಎಂದು ಹವಾಮಾನ ಮುನ್ಸೂಚನೆಯ ಖಾಸಗಿ ಸಂಸ್ಥೆ ಸ್ಕೈಮೆಟ್‌ ಹೇಳಿದೆ.

ಈ ಬಾರಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಶೇಕಡ 93ರಷ್ಟು ಮಳೆ ಆಗಲಿದೆ. ಎಲ್‌ –ನೀನೊ (ಸಮುದ್ರದ ತಾಪಮಾನದಲ್ಲಿ ಅಸಹಜ ಹೆಚ್ಚಳ) ಪರಿಣಾಮದಿಂದ ಮಳೆ ಕಡಿಮೆಯಾಗಲಿದೆ ಎಂದು ಸ್ಕೈಮೆಟ್‌ ತಿಳಿಸಿದೆ.

ಸಾಮಾನ್ಯವಾಗಿ ಜೂನ್‌ 1ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ. ಮೇ 22ರ ವೇಳೆಗೆ ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲಿದೆ.ನೈಋತ್ಯ ಮುಂಗಾರು ಪ್ರವೇಶ ಎರಡು ಮೂರು ದಿನಹೆಚ್ಚು ಕಡಿಮೆಯಾಗಿದೆ ಎಂದಿದೆ.

ADVERTISEMENT

ಈ ಋತುಮಾನದಲ್ಲಿ ದೇಶದ ನಾಲ್ಕು ಭಾಗಗಳಲ್ಲಿಯೂ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ವಾಯುವ್ಯ ಮತ್ತು ದಕ್ಷಿಣ ಪರ್ಯಾಯದ್ವೀಪಗಳ ಭಾಗಗಳಿಗೆ ಹೋಲಿಸಿದರೆ, ಪೂರ್ವ ಮತ್ತು ಈಶಾನ್ಯ ಭಾರತ ಮತ್ತು ಕೇಂದ್ರ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಲಿದೆ.

ವರ್ಷ ಮುಂಗಾರು ಪ್ರವೇಶ ನಿರೀಕ್ಷಿತ ದಿನಾಂಕ

2013 ಜೂನ್‌ 1 ಜೂನ್‌3

2014 ಜೂನ್‌ 6 ಜೂನ್‌5

2015 ಜೂನ್‌ 5 ಮೇ30

2016 ಜೂನ್ 8 ಜೂನ್‌7

2017 ಮೇ 30 ಮೇ30

2018 ಮೇ 29 ಮೇ 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.