ಹಲ್ಲೆ
– ಗೆಟ್ಟಿ ಚಿತ್ರ
ಲಖನೌ: ಇಲ್ಲಿನ ಬರೇಲಿ ಪಟ್ಟಣದಲ್ಲಿ ಕೆಫೆಯೊಂದರಲ್ಲಿ ಹಿಂದೂ ಬಾಲಕಿಯೊಬ್ಬಳು ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಮುಸಲ್ಮಾನ ಯುವಕರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಶನಿವಾರ ರಾತ್ರಿ ವೇಳೆ ಸ್ಥಳೀಯ ನರ್ಸಿಂಗ್ ಕಾಲೇಜಿನ 8 ಮಂದಿ ಪಾರ್ಟಿ ನಡೆಸುತ್ತಿದ್ದರು. ಇದರಲ್ಲಿ ಇಬ್ಬರು ಮುಸಲ್ಮಾನ ಯುವಕರು ಭಾಗವಹಿಸಿದ್ದರು. ಈ ವೇಳೆ ಬಜರಂಗದಳದ ಡಜನ್‌ಗೂ ಅಧಿಕ ಮಂದಿ ನುಗ್ಗಿ ‘ಲವ್ ಜಿಹಾದ್‘ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದರು.
ಈ ವೇಳೆ ಯುವಕರನ್ನು ಬಿಟ್ಟುಬಿಡುವಂತೆ ಬಾಲಕಿಯು ಮನವಿ ಮಾಡಿಕೊಂಡರೂ ಹಲ್ಲೆ ಮುಂದುವರಿಸಿ, ಕೆಫೆಯನ್ನು ಧ್ವಂಸಗೊಳಿಸಿದರು.
ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೆಫೆ ಮಾಲೀಕ, ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದು, ಶಾಂತಿಗೆ ಭಂಗ ತಂದ ಪ್ರಕರಣ ದಾಳಿಸಿದರು.
ಹಲ್ಲೆ ನಡೆಸಿದ ಆರೋಪದ ಮೇಲೆ ಬಜರಂಗದಳದ ಮುಖಂಡರಾದ ದೀಪಕ್ ಪಾಠಕ್, ರಿಷಬ್ ಠಾಕೂರ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.