ADVERTISEMENT

ಜೈಸಲ್ಮೇರ್‌ನಲ್ಲಿ ಫಿರಂಗಿ ಸ್ಫೋಟ: ಬಿಎಸ್‌ಎಫ್ ಯೋಧ ಸಾವು

ಪಿಟಿಐ
Published 19 ಡಿಸೆಂಬರ್ 2021, 11:31 IST
Last Updated 19 ಡಿಸೆಂಬರ್ 2021, 11:31 IST
.
.   

ಜೈಸಲ್ಮೇರ್: ಭಾನುವಾರ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕಿಶನ್‌ಗಡದ ಗುಂಡು ಹಾರಾಟ ತರಬೇತಿ ಕೇಂದ್ರದಲ್ಲಿ ಫಿರಂಗಿಯೊಂದು ಸ್ಫೋಟಿಸಿ ಒಬ್ಬ ಬಿಎಸ್‌ಎಫ್ ಯೋಧ ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯೋಧನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ರಾಮಗಡದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

136 ಬೆಟಾಲಿಯನ್‌ನ ಬಿಎಸ್‌ಎಫ್ ಯೋಧರು ತರಬೇತಿಯಲ್ಲಿ ಭಾಗವಹಿಸಲು ಬಂದಿದ್ದಾಗ ಈ ದುರಂತ ಸಂಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.