ADVERTISEMENT

ವಿಮಾನ ಪತನ: ಇಬ್ಬರು ತರಬೇತಿನಿರತ ಪೈಲಟ್‌ಗಳು ನಾಪತ್ತೆ

ಪಿಟಿಐ
Published 18 ಮಾರ್ಚ್ 2023, 14:02 IST
Last Updated 18 ಮಾರ್ಚ್ 2023, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಲಾಘಾಟ್‌: ಮಧ್ಯಪ್ರದೇಶದ ಬಾಲಾಘಾಟ್‌ ಜಿಲ್ಲೆಯಲ್ಲಿ ವಿಮಾನವೊಂದು ಪತನಗೊಂಡು, ಇಬ್ಬರು ತರಬೇತಿನಿರತ ಪೈಲಟ್‌ಗಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ವಿಮಾನ ಪತನಗೊಂಡಿರುವ ಲಾಂಜಿ ಮತ್ತು ಕಿರ್ನಾಪುರ ಪರ್ವತ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪುರುಷನ ಮೃತದೇಹವೊಂದು ದೊರೆತಿದ್ದು, ಇದರ ಗುರುತು ಪತ್ತೆಗಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಮೀರ್‌ ಸೌರಭ್‌ ಹೇಳಿದ್ದಾರೆ.

ನಾಪತ್ತೆಯಾಗಿರುವ ತರಬೇತಿನಿರತ ಮಹಿಳಾ ಪೈಲಟ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದೂ ವಿವರಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಈ ತರಬೇತಿ ವಿಮಾನವು ಹಾರಾಟ ಆರಂಭಿಸಿತ್ತು ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.