ADVERTISEMENT

ಮುಂಬೈ | ಡೇಟಾ ನೆಟ್‌ವರ್ಕ್‌ ಸ್ಥಗಿತ: ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಚೆಕ್‌ ಇನ್‌ ವ್ಯವಸ್ಥೆಯಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 16:18 IST
Last Updated 9 ಆಗಸ್ಟ್ 2025, 16:18 IST
ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣ–ಪಿಟಿಐ ಚಿತ್ರ
ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣ–ಪಿಟಿಐ ಚಿತ್ರ   

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಡೇಟಾ ನೆಟ್‌ವರ್ಕ್‌ ಸ್ಥಗಿತಗೊಂಡಿದ್ದರಿಂದ ಚೆಕ್‌ ಇನ್‌ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿಕೊಂಡು, ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ತಾಂತ್ರಿಕ ಸಮಸ್ಯೆ ಉಂಟಾಗಿರುವುದನ್ನು ವಿಮಾನ ನಿಲ್ದಾಣ ಹಾಗೂ ಏರ್‌ಲೈನ್ಸ್‌ನ ಅಧಿಕಾರಿಗಳು ಖಚಿತಪಡಿಸಿದ್ದಾರೆ.‌

‘ನಾವು ಈಗ ಇಡೀ ವಿಮಾನ ನಿಲ್ದಾಣದಲ್ಲಿ ನೆಟ್‌ವರ್ಕ್‌ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ತಂಡವು ನಿರಂತರ ಪ್ರಯತ್ನಿಸುತ್ತಿದೆ. ಆದರೂ, ಅಡಚಣೆಯನ್ನು ಕಡಿಮೆ ಮಾಡಲು ಮ್ಯಾನುವಲ್‌ ಕಾರ್ಯಾಚರಣೆ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಪ್ರಯಾಣಿಕರು ತಾಳ್ಮೆ ವಹಿಸಬೇಕು’ ಎಂದು ವಿಮಾನ ನಿಲ್ದಾಣವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.