ADVERTISEMENT

ಮುಂಬೈ: ಕೊರೊನಾ ಭೀತಿ, ಆಡಂಬರವಿಲ್ಲದೇ ಗಣೇಶ ಮೂರ್ತಿ ವಿಸರ್ಜನೆ

ನಗರದ ವಿವಿಧೆಡೆ ಭದ್ರತೆಗಾಗಿ 35 ಸಾವಿರ ಪೊಲೀಸರ ನಿಯೋಜನೆ

ಪಿಟಿಐ
Published 1 ಸೆಪ್ಟೆಂಬರ್ 2020, 10:29 IST
Last Updated 1 ಸೆಪ್ಟೆಂಬರ್ 2020, 10:29 IST
ಮುಂಬೈ ಮಹಾನಗರದ ವಿವಿಧೆಡೆ ಮಂಗಳವಾರದಂದು ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಮುಂಬೈ ಮಹಾನಗರದ ವಿವಿಧೆಡೆ ಮಂಗಳವಾರದಂದು ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.   

ಮುಂಬೈ: ಕೋವಿಡ್‌ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಂಗಳವಾರ ಯಾವುದೇ ಅದ್ಧೂರಿ, ಆಡಂಭರದ ಮೆರವಣಿಗೆ ಇಲ್ಲದೇ ಗಣೇಶ ಮೂರ್ತಿ ವಿಸರ್ಜನೆ ಕಾರ್ಯ ನೆರವೇರಿತು.

ಅನಂತ ಚತುರ್ದಶಿ ಹಬ್ಬದಂದು ಮುಂಬೈನ ವಿವಿಧ ಭಾಗಗಳಲ್ಲಿ ನಾಗರಿಕರುಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.

ನಗರದಾದ್ಯಂತ ಸುಮಾರು 35 ಸಾವಿರ ಪೊಲೀಸರನ್ನು ಬಂದೋಬಸ್ತ್‌ಗೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ ಯೋಜಿಸಿದ್ದರು.

ADVERTISEMENT

ನಗರದ 16 ಸಾರ್ವಜನಿಕ ಸ್ಥಳಗಳು ಮತ್ತು 476 ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು, ನಿಗದಿತ ಸ್ಥಳಗಳಲ್ಲಿ ವಿಸರ್ಜಿಸಲಾಯಿತು.

ಮುಂಬೈ ಗಣೇಶೋತ್ಸವ ಪ್ರತಿ ಭಾರಿಯೂ ಅದ್ಧೂರಿಯಾಗಿ ನೆರವೇರುತ್ತದೆ. ಆದರೆ, ಈ ಬಾರಿ ಕೋವಿಡ್ ಕಾರಣದಿಂದಾಗಿ ಮುಂಬೈ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.