ADVERTISEMENT

ನಾಯಿ ಕಚ್ಚಿದ್ದ ಪ್ರಕರಣ: 12 ವರ್ಷದ ಬಳಿಕ ಮಾಲೀಕನಿಗೆ 3 ತಿಂಗಳ ಜೈಲು!

ಪಿಟಿಐ
Published 6 ಫೆಬ್ರುವರಿ 2023, 12:46 IST
Last Updated 6 ಫೆಬ್ರುವರಿ 2023, 12:46 IST
.
.   

ಮುಂಬೈ : ಸಾಕು ನಾಯಿಯೊಂದು ವ್ಯಕ್ತಿಯೊಬ್ಬರಿಗೆ ಕಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷದ ನಂತರ ನಾಯಿಯ ಮಾಲೀಕರಿಗೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ.

ಜ.3ರಂದು ಪ್ರಕರಣದ ವಿಚಾರಣೆ ನಡೆಸಿದ ಗಿರ್‌ಗಾವ್‌ ಕೋರ್ಟ್‌ನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎನ್‌.ಎ.ಪಟೇಲ್‌, ನಾಯಿಯ ಮಾಲೀಕ ಸೈರಸ್‌ ಪೆರ್ಸಿ ಹೊರ್ಮುಸ್‌ಜಿ (44) ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಈ ತೀರ್ಪು ನೀಡಿದ್ದಾರೆ.

‘ಇಂಥ ಆಕ್ರಮಣಕಾರಿ ನಾಯಿಗಳನ್ನು ಹೊರಗೆ ಸುತ್ತಾಡಿಸುವ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತೆ ವಹಿಸದಿದ್ದಲ್ಲಿ ಅದು ಸಾರ್ವಜನಿಕರಿಗೆ ಹಾನಿಯುಂಟುಮಾಡಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಏನಿದು ಪ್ರಕರಣ?:

‘2010ರಲ್ಲಿ ಘಟನೆ ನಡೆದಿದ್ದು, ಕೇರ್ಸಿ ಇರಾನಿ ಮತ್ತು ಹೊರ್ಮುಸ್ಜಿ ಅವರು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ–ವಿವಾದದಲ್ಲಿ ತೊಡಗಿದ್ದರು. ಪಕ್ಕದಲ್ಲೇ ಕಾರಿನ ಒಳಗೆ ಹೊರ್ಮುಸ್‌ಜಿ ಅವರ ರಾಟ್‌ವೈಲರ್‌ ಸಾಕು ನಾಯಿ ಇತ್ತು. ಅದು ಹೊರಬಿಡುವಂತೆ ಕೂಗಾಡುತ್ತಿತ್ತು. ಕಾರಿನ ಬಾಗಿಲು ತೆರೆಯದಂತೆ ಮನವಿ ಮಾಡಿದ ಹೊರತಾಗಿಯೂ ಹೊರ್ಮುಸ್‌ಜಿ ಅವರು ನಾಯಿಯನ್ನು ಹೊರಬಿಟ್ಟಿದ್ದರು. ಅದು ಏಕಾಏಕಿ ಇರಾನಿ ಅವರ ಮೇಲೆ ದಾಳಿ ಮಾಡಿತ್ತು. ಅವರ ಬಲಗಾಲು ಮತ್ತು ಬಲಗೈಗೆ ಕಚ್ಚಿತ್ತು’ ಎಂದು ದೂರು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.