ADVERTISEMENT

₹80 ಸಾವಿರ ಕೋಟಿ ದಾಟಿದ ಮುಂಬೈ ಮಹಾನಗರ ಪಾಲಿಕೆ ಬಜೆಟ್‌

ಪಿಟಿಐ
Published 25 ಫೆಬ್ರುವರಿ 2026, 14:31 IST
Last Updated 25 ಫೆಬ್ರುವರಿ 2026, 14:31 IST
ಬ್ರಹನ್ಮುಂಬಯಿ ಮಹಾನಗರ ಪಾಲಿಕೆಯ ಬಜೆಟ್‌ ಮಂಡನೆಗೂ ಮುನ್ನ ಪಾಲಿಕೆಎ ಆಯುಕ್ತ ಭೂಷಣ್‌ ಗಗ್ರಾನಿ (ಬಲಭಾಗ) ಹಾಗೂ ಬಿಎಂಸಿ ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್‌ ಶಿಂದೆ ಅವರು ಬಜೆಟ್‌ ಪ್ರತಿಗಳನ್ನು ಪ್ರದರ್ಶಿಸಿದರು–ಪಿಟಿಐ ಚಿತ್ರ
ಬ್ರಹನ್ಮುಂಬಯಿ ಮಹಾನಗರ ಪಾಲಿಕೆಯ ಬಜೆಟ್‌ ಮಂಡನೆಗೂ ಮುನ್ನ ಪಾಲಿಕೆಎ ಆಯುಕ್ತ ಭೂಷಣ್‌ ಗಗ್ರಾನಿ (ಬಲಭಾಗ) ಹಾಗೂ ಬಿಎಂಸಿ ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್‌ ಶಿಂದೆ ಅವರು ಬಜೆಟ್‌ ಪ್ರತಿಗಳನ್ನು ಪ್ರದರ್ಶಿಸಿದರು–ಪಿಟಿಐ ಚಿತ್ರ   

ಮುಂಬೈ: ದೇಶದ ಅತ್ಯಂತ ಶ್ರೀಮಂತ ಸ್ಥಳೀಯಾಡಳಿತ ಸಂಸ್ಥೆಯಾಗಿರುವ ಮುಂಬೈ ಮಹಾನಗರ ಪಾಲಿಕೆಯ ಬಜೆಟ್‌ ಗಾತ್ರವು ಈ ಸಲ ₹80 ಸಾವಿರ ಕೋಟಿ ದಾಟಲಿದೆ.

‘ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಬಜೆಟ್‌ ಗಾತ್ರವು ದೇಶದ ಕೆಲವು ರಾಜ್ಯಗಳ ಬಜೆಟ್‌ ಗಾತ್ರವನ್ನು ಮೀರಿಸಲಿದೆ.

ಮುಂಬೈ ಪಾಲಿಕೆಯ 227 ಸ್ಥಾನಗಳಿಗೆ ಚುನಾವಣೆ ನಡೆದ ಒಂದು ತಿಂಗಳ ನಂತರ ಪಾಲಿಕೆ ಆಯುಕ್ತ ಭೂಷಣ್‌ ಗಗ್ರಾನಿ ಅವರು ಬುಧವಾರ 2026–27 ನೇ ಸಾಲಿನ ಬಜೆಟ್‌ ಮಂಡಿಸಿದರು.

ADVERTISEMENT

‘ಈ ಸಲದ ಬಜೆಟ್‌ ಗಾತ್ರವು ₹80,952.56 ಕೋಟಿ ಮೀರಲಿದ್ದು, 2025–26ಕ್ಕೆ ಹೋಲಿಸಿದರೆ (₹74.427.41 ಕೋಟಿ) ಶೇಕಡ 8.77 ರಷ್ಟು ಏರಿಕೆಯಾಗಿದೆ’ ಎಂದು ತಿಳಿಸಿದ್ದಾರೆ.

ಬಿಎಂಸಿ ಬಜೆಟ್‌ ಗಾತ್ರವು ದೇಶದ ಹಲವು ಸಣ್ಣ ರಾಜ್ಯಗಳಿಗಿಂತಲೂ ಹೆಚ್ಚಿದೆ. ಮಿಜೋರಾಂ (₹15,043 ಕೋಟಿ), ಸಿಕ್ಕಿಂ (₹16,196 ಕೋಟಿ) ನಾಗಾಲ್ಯಾಂಡ್‌ (₹24,699 ಕೋಟಿ), ಮಣಿಪುರ (₹29,988 ಕೋಟಿ), ಮೇಘಾಲಯ (₹30,003 ಕೋಟಿ) ತ್ರಿಪುರಾ (₹32,423 ಕೋಟಿ), ಅರುಣಾಚಲಪ್ರದೇಶ (₹39,842ಕೋಟಿ) ನಷ್ಟಿದೆ. ಗೋವಾ(₹28,162 ಕೋಟಿ) ಹಿಮಾಚಲಪ್ರದೇಶ (₹58,514 ಕೋಟಿ)  ರಾಜ್ಯಕ್ಕಿಂತಲೂ ಬಿಎಂಸಿ ಬಜೆಟ್‌ ಗಾತ್ರ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.