ADVERTISEMENT

ಮಗುವಿನ ಚಿಕಿತ್ಸೆಗೆ ₹16 ಕೋಟಿ ಸಂಗ್ರಹ: ಪೋಷಕರಿಂದ ಧನ್ಯವಾದ

ಕ್ರೌಡ್‌ಫಂಡಿಂಗ್‌ ಮೂಲಕ ಧನಸಹಾಯ

ಏಜೆನ್ಸೀಸ್
Published 17 ಫೆಬ್ರುವರಿ 2021, 8:06 IST
Last Updated 17 ಫೆಬ್ರುವರಿ 2021, 8:06 IST
ಚಿತ್ರ: teera_fights_sma ಇನ್‌ಸ್ಟಾಗ್ರಾಮ್ ಖಾತೆ
ಚಿತ್ರ: teera_fights_sma ಇನ್‌ಸ್ಟಾಗ್ರಾಮ್ ಖಾತೆ   

ಮುಂಬೈ: ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ (ಎಸ್‌ಎಂಎ) ಬಳಲುತ್ತಿದ್ದ 5 ತಿಂಗಳ ಮಗುವಿನ ಚಿಕಿತ್ಸೆಗಾಗಿ ₹16 ಕೋಟಿ ಹಣ (ಕ್ರೌಡ್‌ಫಂಡಿಂಗ್‌) ಸಂಗ್ರಹವಾಗಿದ್ದು, ದಾನಿಗಳಿಗೆ ಮಗುವಿನ ಪೋಷಕರು ಧನ್ಯವಾದ ಸಲ್ಲಿಸಿದ್ದಾರೆ.

ಮುಂಬೈನ ಮಗು ಟೀರಾ ಕಾಮತ್‌ ಚಿಕಿತ್ಸೆಗೆ ₹22 ಕೋಟಿ ಹಣದ ಅಗತ್ಯತೆ ಇತ್ತು. ಅಷ್ಟೊಂದು ವೆಚ್ಚ ಭರಿಸಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಪ್ರಿಯಾಂಕಾ ಮತ್ತು ಮಿಹೀರ್‌ ಕಾಮತ್‌ ದಂಪತಿ ಧನಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಭಾರತ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಜನರು ವೆಬ್‌ಸೈಟ್‌ ಮೂಲಕ ದೇಣಿಗೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ADVERTISEMENT

‘ಇದು ದಾಖಲೆಯ ಅಭಿಯಾನವಾಗಿದೆ. ಜನಸಮೂಹದಿಂದ ಒಬ್ಬ ವ್ಯಕ್ತಿ ಇಷ್ಟು ದೊಡ್ಡ ಮೊತ್ತವನ್ನು ಎಂದಿಗೂ ಗಳಿಸಿರಲಿಲ್ಲ. 87 ಸಾವಿರ ಜನರು ಸರಾಸರಿ ₹1,750ದಂತೆ ದಾನ ಮಾಡಿದ್ದಾರೆ. ಈ ಅಭಿಯಾನ ವೈದ್ಯಕೀಯ ಹಣದ ಅಗತ್ಯವಿರುವವರಿಗೆ ಭರವಸೆ ಮೂಡಿಸುತ್ತದೆ’ ಎಂದು ಇಂಪ್ಯಾಕ್ಟ್‌ ಗುರು ಸಿಇಒ ಪಿಯೂಷ್‌ ಜೈನ್‌ ತಿಳಿಸಿದ್ದಾರೆ.

ಪೋಷಕರ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಮಗುವಿಗೆ ಬೇಕಾದ ಔಷಧಿ ಮೇಲಿನ ಆಮದು ಸುಂಕ ಮತ್ತು ಔಷಧಿಗಳ ಮೇಲಿನ ಜಿಎಸ್‌ಟಿ ₹ 6 ಕೋಟಿಯನ್ನು ಮನ್ನಾ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.