ADVERTISEMENT

ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ

ಪಿಟಿಐ
Published 5 ಡಿಸೆಂಬರ್ 2025, 2:57 IST
Last Updated 5 ಡಿಸೆಂಬರ್ 2025, 2:57 IST
<div class="paragraphs"><p>ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ</p></div>

ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ

   

ಮುಂಬೈ: ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಂಕ್ಷಿಗಳನ್ನು ವಂಚಿಸುತ್ತಿದ್ದ 9 ಸಂಸ್ಥೆಗಳ ಮೇಲೆ ಮುಂಬೈ ಸಿಸಿಬಿ ಪೊಲೀಸರು ಹಾಗೂ ವಿದೇಶಾಂಗ ಇಲಾಖೆಯ ವಲಸೆ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದಾರೆ.

ದಾಳಿಯ ವೇಳೆ ಸಂಸ್ಥೆಗಳಿಂದ ಹಲವು ಅಕ್ರಮ ಚಟುವಟಿಕೆಗಳು ಪತ್ತೆಯಾಗಿದ್ದು 258 ಭಾರತೀಯ ವ್ಯಕ್ತಿಗಳಿಗೆ ನೀಡಿದ ನಕಲಿ ನೇಮಕಾತಿ ಪತ್ರಗಳು, ಐಡಿ ಕಾರ್ಡುಗಳು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಎಲ್ಲ 9 ಕಂಪನಿಗಳ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಮಾಡಲಾದ ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಆರೋಪಿತರು 1983ರ ವಲಸೆ ಕಾಯ್ದೆ ಉಲ್ಲಂಘಿಸಿ ಭಾರತೀಯ ನಾಗರಿಕ ಉದ್ಯೋಗಾಂಕ್ಷಿಗಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದರು. ವಿದೇಶದಲ್ಲಿ ಉದ್ಯೋಗ ಬಯಸುವವರು ಇಂತಹ ಸಂಸ್ಥೆಗಳಿಂದ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.