ADVERTISEMENT

ಕೋವಿಡ್‌–19: ಮುಂಬೈನಲ್ಲಿ 1,898 ಹೊಸ ಪ್ರಕರಣ ಪತ್ತೆ

ಪಿಟಿಐ
Published 24 ಜೂನ್ 2022, 14:08 IST
Last Updated 24 ಜೂನ್ 2022, 14:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ನಗರದಲ್ಲಿ ಕೋವಿಡ್‌–19 ದೃಢಪಟ್ಟ 1,898ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರಿಬ್ಬರು ಮೃತಪಟ್ಟಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆ ಪ್ರಕಟಿಸಿದೆ.

ಮಹಾರಾಷ್ಟ್ರದ ರಾಜಧಾನಿಯಾಗಿರುವ ಮುಂಬೈನಲ್ಲಿ ಇದರೊಂದಿಗೆ ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ11,03,760ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ19,591ಕ್ಕೆ ತಲುಪಿದೆ.

ಗುರುವಾರಕ್ಕೆ ಹೋಲಿಸಿದರೆ, ಇಂದು581 ಕಡಿಮೆಪ್ರಕರಣಗಳು ವರದಿಯಾಗಿವೆ. ಗುರುವಾರ ಒಟ್ಟು2,479 ಹೊಸ ಪ್ರಕರಣಗಳು ಪತ್ತೆಯಾಗಿದ್ದವು ಮತ್ತು ಒಬ್ಬರು ಮೃತಪಟ್ಟಿದ್ದರು.ನಗರದಲ್ಲಿ ಸದ್ಯ13,257 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿನಆಸ್ಪತ್ರೆಗಳಲ್ಲಿ ಒಟ್ಟು 77 ಮಂದಿಗೆ ಆಮ್ಲಜನಕದ ನೆರವು ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪಾಲಿಕೆಯ ಮಾಹಿತಿ ಪ್ರಕಾರ,ಇಂದು ಚೇತರಿಸಿಕೊಂಡಿರುವ 2,253 ಮಂದಿಯೂ ಸೇರಿದಂತೆ ಈವರೆಗೆ 10,70,912 ಸೋಂಕಿತರು ಕೋವಿಡ್‌ನಿಂದಗುಣಮುಖರಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ 97ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.