ADVERTISEMENT

ಮುಂಬೈ: ಮೂರು ತಿಂಗಳಲ್ಲೇ ಅತಿ ಕಡಿಮೆ ಕೋವಿಡ್-19 ಪ್ರಕರಣಗಳು ದಾಖಲು

ಏಜೆನ್ಸೀಸ್
Published 28 ಜುಲೈ 2020, 11:44 IST
Last Updated 28 ಜುಲೈ 2020, 11:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಕೊರೊನಾ ವೈರಸ್ ಸೋಂಕಿನ ತೀವ್ರ ಹೊಡೆತಕ್ಕೆ ಸಿಲುಕಿದ್ದ ದೇಶದ ನಗರಗಳ ಪೈಕಿ ಮುಂಬೈನಲ್ಲಿ ಈ ಹಿಂದೆ ದಿನವೊಂದಕ್ಕೆ ಅತ್ಯಧಿಕ ಸುಮಾರು 9 ಸಾವಿರ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಆದರೆ ಮಂಗಳವಾರ ಕಳೆದ ಮೂರು ತಿಂಗಳಲ್ಲೇ ಅತಿ ಕಡಿಮೆ ಪ್ರಕರಣಗಳು ದೃಢಪಟ್ಟಿವೆ.

ಸೋಮವಾರ ನಡೆಸಿದ 8,776 ಮಾದರಿ ಪರೀಕ್ಷೆಗಳಿಂದ ಕೇವಲ 700 ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.

ನಗರದಲ್ಲಿ ಭಾನುವಾರ ನಡೆಸಿದ್ದ ಪರೀಕ್ಷೆಗಳ ಪೈಕಿ ಸೋಮವಾರ 1,033 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ ಮುಂಬೈನ ಚೇತರಿಕೆ ಪ್ರಮಾಣವು ಶೇ 73 ರಷ್ಟಿದೆ. ಜುಲೈ 20 ರಿಂದ ಜುಲೈ 26 ರವರೆಗೆ ಮುಂಬೈನಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಒಟ್ಟಾರೆ ಬೆಳವಣಿಗೆ ದರವು ಶೇ 1.03 ರಷ್ಟಿತ್ತು.

ADVERTISEMENT

ಸೋಮವಾರ ಮಹಾರಾಷ್ಟ್ರದಾದ್ಯಂತ 7,924 ಕೋವಿಡ್ ಪ್ರಕರಣಗಳು ದೃಢಪಟ್ಟು, 227 ಜನರು ಸಾವಿಗೀಡಾಗಿದ್ದರು. ಒಟ್ಟಾರೆ ಈವರೆಗೂ 6,132 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಮುಂಬೈನಲ್ಲಿ 1,021 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 39 ಜನರು ಮೃತಪಟ್ಟಿದ್ದರು.

ಇನ್ನು ಈ ಕುರಿತು ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದು, 'ಶುಭಸುದ್ದಿ: ಮುಂಬೈನಲ್ಲಿ ಇಂದು ಕೇವಲ 700 ಕೋವಿಡ್ ಪ್ರಕರಣಗಳು ವರದಿಯಾಗಿವೆ ಮತ್ತು ಒಂದೇ ದಿನದಲ್ಲಿ (8776) ಮುಂಬೈನಲ್ಲಿ ಅತಿ ಹೆಚ್ಚಿನ ಪರೀಕ್ಷೆಯೊಂದಿಗೆ. ವೈರಸ್ ತಡೆಯುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಬೆನ್ನಟ್ಟಲಾಗಿದೆ. ಮೂರು ತಿಂಗಳ ನಂತರ ಇದು ಒಳ್ಳೆಯ ಬೆಳವಣಿಗೆ' ಎಂದಿದ್ದಾರೆ.

'ಎಚ್ಚರಿಕೆ: ನಿಮ್ಮನ್ನು ಕಾಯುವವರನ್ನು ನಿರಾಸೆ ಮಾಡಬೇಡಿ! ನಿಮ್ಮ ಮಾಸ್ಕ್‌ಗಳಿಗೆ ನಿರಾಸೆ ಮಾಡಬೇಡಿ! ಸಂಖ್ಯೆಗಳನ್ನು ಮಾತ್ರ ಕಡಿಮೆ ಮಾಡಿ!' ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಇಂದು ಟ್ವೀಟ್‌ಗಳ ಸರಣಿಯಲ್ಲಿ ಹೇಳಿದ್ದಾರೆ.

ಮುಂಬೈನ ಅತ್ಯಂತ ಕೆಟ್ಟ ತಾಣಗಳಲ್ಲಿ ಒಂದಾದ, ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಪ್ರದೇಶದಲ್ಲಿ ಈಗ 98 ಸಕ್ರಿಯ ಪ್ರಕರಣಗಳಿದ್ದು, ಸೋಮವಾರ ಕೇವಲ 9 ಹೊಸ ಪ್ರಕರಣಗಳು ವರದಿಯಾಗಿವೆ. ಧಾರಾವಿಯಲ್ಲಿ ಒಟ್ಟು 2,540 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.