ADVERTISEMENT

ಕೋವಿಡ್-19 ಲಸಿಕೆ ಪಡೆದ ಬಳಿಕ ಮುಂಬೈನಲ್ಲಿ ಹಿರಿಯ ನಾಗರಿಕ ಸಾವು

ಪಿಟಿಐ
Published 9 ಮಾರ್ಚ್ 2021, 15:31 IST
Last Updated 9 ಮಾರ್ಚ್ 2021, 15:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಇಲ್ಲಿನ ಅಂಧೇರಿಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದ ನಂತರ 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿರಿಯ ನಾಗರಿಕರಿಗೆ ಮಧ್ಯಾಹ್ನ 3:50ರ ಸುಮಾರಿಗೆ ಚುಚ್ಚುಮದ್ದು ನೀಡಲಾಯಿತು, ನಂತರ ಅವರು ಮೂರ್ಛೆ ಹೋಗಿದ್ದರು. ಕೂಡಲೇ ಅವರನ್ನು ಐಸಿಯುಗೆ ಕರೆದೊಯ್ಯಲಾಯಿತು. ಆದರೆ ಸಂಜೆ 5 ಗಂಟೆ ಸುಮಾರಿಗೆ ಮೃತಪಟ್ಟರು ಎಂದು ಅವರು ಹೇಳಿದರು.

ವ್ಯಾಕ್ಸಿನೇಷನ್ ನಂತರ ವ್ಯಕ್ತಿಯು ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದ್ದು, ಸಾವಿಗೆ ನಿಖರ ಕಾರಣವನ್ನು ಕಂಡುಹಿಡಿಯಲು ಸರ್ಕಾರಿ ಜೆಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಜನವರಿ 16 ರಂದು ಲಸಿಕೆ ಅಭಿಯಾನ ಶುರುವಾದಾಗಿನಿಂದ ಸೋಮವಾರ (ಮಾ.8) ಸಂಜೆ ವೇಳೆಗೆ, ರಾಜ್ಯದಲ್ಲಿ 19,05,388 ಜನರಿಗೆ ಚುಚ್ಚುಮದ್ದನ್ನು ನೀಡಲಾಗಿದೆ. ಇದರಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ 3,57,210 ಜನರಿದ್ದಾರೆ ಎಂದು ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.