ADVERTISEMENT

ಮುಂಬೈ: ಭಾರಿ ಮಳೆಗೆ ಉಕ್ಕಿ ಹರಿದ ಪವಾಯಿ ಕೆರೆ

ಪಿಟಿಐ
Published 12 ಜೂನ್ 2021, 15:48 IST
Last Updated 12 ಜೂನ್ 2021, 15:48 IST
ಮುಂಬೈನಲ್ಲಿ ಭಾರಿ ಮಳೆಗೆ ಶನಿವಾರ ಉಕ್ಕಿ ಹರಿದ ಪವಾಯಿ ಕೆರೆ. (ಪಿಟಿಐ ಚಿತ್ರ)
ಮುಂಬೈನಲ್ಲಿ ಭಾರಿ ಮಳೆಗೆ ಶನಿವಾರ ಉಕ್ಕಿ ಹರಿದ ಪವಾಯಿ ಕೆರೆ. (ಪಿಟಿಐ ಚಿತ್ರ)   

ಮುಂಬೈ: ಕೆಲ ದಿನಗಳಿಂದ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾದ ಕಾರಣ ಇಲ್ಲಿನ ಪವಾಯಿ ಕೆರೆ ಶನಿವಾರ ಉಕ್ಕಿ ಹರಿಯಿತು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

545 ಕೋಟಿ ಲೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಈ ಕೆರೆಯ ನೀರನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಬಿಎಂಸಿಯ ಪ್ರಕಾರ, ಪವಾಯಿ ಕೆರೆಯು ಕಳೆದ ಮಳೆಗಾಲದಲ್ಲಿ 2020ರ ಜುಲೈ 5ರಂದು ಭರ್ತಿಯಾಗಿ, ಉಕ್ಕಿ ಹರಿದಿತ್ತು.

ADVERTISEMENT

ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು ಭಾನುವಾರ ರೆಡ್ ಅಲರ್ಟ್ ಹಾಗೂ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.