ADVERTISEMENT

ಬಿಜೆಪಿ ಮೊದಲೇ ತಿಳಿಸಿದ್ದರೆ ಮುರ್ಮು ಅವರನ್ನು ಬೆಂಬಲಿಸಲು ಯೋಚಿಸುತ್ತಿದ್ದೆ: ಮಮತಾ

ಪಿಟಿಐ
Published 1 ಜುಲೈ 2022, 14:26 IST
Last Updated 1 ಜುಲೈ 2022, 14:26 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ    

ಕೋಲ್ಕತ್ತ: ಒಡಿಶಾ ಮೂಲದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿಸುವುದಾಗಿ ಬಿಜೆಪಿಯು ಮೊದಲೇ ಹೇಳಿದಿದ್ದರೆ ಬೆಂಬಲಿಸುವ ಬಗ್ಗೆ ಯೋಚಿಸುತ್ತಿದ್ದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿನ ರಾಜಕೀಯ ಸ್ಥಿತ್ಯಂತರಗಳು ಮುರ್ಮು ಅವರ ಗೆಲುವಿನ ಸಾಧ್ಯತೆಯನ್ನು ಮತ್ತಷ್ಟು ಸುಲಭವಾಗಿಸಿವೆ. ಎನ್‌ಡಿಎಯ ಸಂಖ್ಯೆಯು ಹೆಚ್ಚಾಗಿದೆ ಎಂದು ಬ್ಯಾನರ್ಜಿ ಹೇಳಿದರು. ‘ಒಮ್ಮತದ ಅಭ್ಯರ್ಥಿಯು ದೇಶಕ್ಕೆ ಯಾವಾಗಲೂ ಹಿತ’ ಎಂದೂ ಅವರು ಇದೇ ವೇಳೆ ಹೇಳಿದರು.

‘ರಾಷ್ಟ್ರಪತಿ ಸ್ಥಾನಕ್ಕೆ ಮುರ್ಮು ಹೆಸರನ್ನು ಘೋಷಿಸುವ ಮೊದಲು ಬಿಜೆಪಿ ನಮ್ಮ ಸಲಹೆಯನ್ನು ಕೇಳಿದ್ದರೆ, ನಾವು ಅದನ್ನು ಪರಿಗಣಿಸಬಹುದಿತ್ತು. ಈಗ ವಿರೋಧ ಪಕ್ಷಗಳು ಏನು ತೀರ್ಮಾನಿಸುತ್ತವೆಯೋ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ’ ಎಂದು ಮಮತಾ ಅವರು ತಿಳಿಸಿದರು.

ADVERTISEMENT

ಕಾಂಗ್ರೆಸ್, ಟಿಎಂಸಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯಾಗಿ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.