ಇಲಾನ್ ಮಸ್ಕ್
–ಎಎಫ್‌ಪಿ ಚಿತ್ರ
ನ್ಯೂಯಾರ್ಕ್: ಆ್ಯಪಲ್ ಫೋನ್‌ನ ಆ್ಯಪ್ ಸ್ಟೋರ್ ಶಿಫಾರಸು ಮಾಡಿರುವ ಅತ್ಯುತ್ತಮ ಆ್ಯಪ್‌ಗಳಲ್ಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ ಹಾಗೂ ಕೃತಕ ಬುದ್ಧಿಮತ್ತೆಯ ‘ಗ್ರೋಕ್’ ಆ್ಯಪ್ ಸೇರಿಸಿಲ್ಲ. ಹೀಗಾಗಿ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ನಡೆಸಲು ಸ‍್ಪೇಸ್‌ಎಕ್ಸ್, ಟೆಸ್ಲಾ ಹಾಗೂ ‘ಎಕ್ಸ್’ನ ಮಾಲೀಕ ಇಲಾನ್ ಮಸ್ಕ್ ನಿರ್ಧರಿಸಿದ್ದಾರೆ.
‘ಹಾಯ್, ಆ್ಯಪಲ್ ಸ್ಟೋರ್, ವಿಶ್ವದ ನಂ.1 ನ್ಯೂಸ್ ಆ್ಯಪ್ ‘ಎಕ್ಸ್’ ಹಾಗೂ ವಿಶ್ವದ ಐದನೇ ಅತ್ಯುತ್ತಮ ಆ್ಯಪ್ ಆಗಿರುವ ‘ಗ್ರೋಕ್’ ಅನ್ನು ಏಕೆ ಸೇರಿಸಿಲ್ಲ? ನೀವು ರಾಜಕೀಯ ಮಾಡುತ್ತಿದ್ದೀರಾ? ಇದನ್ನು ವಿಚಾರಿಸುವ ಮನಸ್ಸುಗಳು ಇವೆ ಎಂಬುದು ಗೊತ್ತಿರಲಿ’ ಎಂದು ಮಸ್ಕ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಈ ಕುರಿತು ಆ್ಯಪಲ್ ಸಂಸ್ಥೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.