ADVERTISEMENT

ಭಾರತದಲ್ಲಿ ಕ್ಷೀಣಿಸಿದ ಧಾರ್ಮಿಕ ಸ್ವಾತಂತ್ರ್ಯ: ಅಮೆರಿಕದ ಅಂತರರಾಷ್ಟ್ರೀಯ ಆಯೋಗ

ಪಿಟಿಐ
Published 23 ಏಪ್ರಿಲ್ 2021, 8:57 IST
Last Updated 23 ಏಪ್ರಿಲ್ 2021, 8:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸಿದೆ ಎಂದು ಆರೋಪಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌), ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ’ (ಸಿಪಿಸಿ) ಎಂದು ಹೆಸರಿಸುವಂತೆ ಶಿಫಾರಸು ಮಾಡಿದೆ.

ಈ ಅಭಿಪ್ರಾಯಕ್ಕೆ ಭಾರತೀಯ–ಅಮೆರಿಕನ್‌ ಮುಸ್ಲಿಂ, ಸಿಖ್, ಕ್ರಿಶ್ಚಿಯನ್‌ ಸಮುದಾಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಯುಎಸ್‌ಸಿಐಆರ್‌ಎಫ್‌ ತನ್ನ ವಾರ್ಷಿಕ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸುವಂತೆ ಅಮೆರಿಕದ ಸರ್ಕಾರವನ್ನು ಒತ್ತಾಯಿಸಿವೆ.

‘ಧಾರ್ಮಿಕ ಸ್ವಾತಂತ್ರ್ಯವನ್ನು ಅತಿ ಹೆಚ್ಚು ಉಲ್ಲಂಘನೆ ಮಾಡುವ ವಿಶ್ವದ ರಾಷ್ಟ್ರಗಳಲ್ಲಿ ಭಾರತವನ್ನು ಹೆಸರಿಸುವುದು ದುರದೃಷ್ಟಕರ. ಆದರೆ ಈ ರೀತಿಯ ನಡೆಯನ್ನು ಮೊದಲೇ ನಿರೀಕ್ಷಿಸಲಾಗಿತ್ತು ಹಾಗೂ ಇದನ್ನು ಸಮರ್ಥಿಸಿಕೊಳ್ಳಲಾಗಿದೆ’ಎಂದು ಭಾರತೀಯ–ಅಮೆರಿಕನ್‌ ಮುಸ್ಲಿಂ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್‌ ಅಹ್ಮದ್‌ ಹೇಳಿದರು.

ADVERTISEMENT

‘ಭಾರತವನ್ನು ಸಿಪಿಸಿ ಎಂದು ಹೆಸರಿಸುವ ಯುಎಸ್‌ಸಿಐಆರ್‌ಎಫ್‌ನ ಶಿಫಾರಸನ್ನು ಅಮೆರಿಕದ ವಿದೇಶಾಂಗ ಇಲಾಖೆ ಸ್ವೀಕರಿಸುತ್ತದೆ ಎಂಬ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು.

‘ಯುಎಸ್‌ಸಿಐಆರ್‌ಎಫ್‌ ಪಕ್ಷಪಾತದಿಂದ ವರ್ತಿಸುತ್ತಿದೆ’ ಎಂದು ಭಾರತ ಈ ಹಿಂದೆಯೇ ದೂರಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.