ADVERTISEMENT

ಸೋನಿಯಾ, ರಾಹುಲ್ ಲೂಟಿ ಪ್ರಸ್ತಾಪಿಸಿದ್ದಕ್ಕೆ ನನ್ನ ಮಗಳ ಮೇಲೆ ಆರೋಪ: ಸ್ಮೃತಿ

ಪಿಟಿಐ
Published 23 ಜುಲೈ 2022, 13:42 IST
Last Updated 23 ಜುಲೈ 2022, 13:42 IST
ಸ್ಮೃತಿ ಇರಾನಿ: ಪಿಟಿಐ ಚಿತ್ರ
ಸ್ಮೃತಿ ಇರಾನಿ: ಪಿಟಿಐ ಚಿತ್ರ   

ನವದೆಹಲಿ: ತಮ್ಮ ಮಗಳು ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಡಿದ್ದ ಆರೋಪವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಳ್ಳಿ ಹಾಕಿದ್ದಾರೆ.

ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ₹ 5,000 ಕೋಟಿ ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಕ್ಕಾಗಿ ನನ್ನ ಮಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ತನ್ನ ಮಗಳ ವ್ಯಕ್ತಿತ್ವವನ್ನು 'ಹತ್ಯೆ ಮಾಡಿದೆ' ಮತ್ತು ‘ಸಾರ್ವಜನಿಕವಾಗಿ ವಿರೂಪಗೊಳಿಸಿದೆ’ಎಂದು ಇರಾನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನನ್ನ ಮಗಳು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಪುರಾವೆ ನೀಡಿ ಎಂದು ಗುಡುಗಿದ್ದಾರೆ.

ADVERTISEMENT

ತಮ್ಮ 18 ವರ್ಷದ ಮಗಳು ಮೊದಲ ವರ್ಷದ ಕಾಲೇಜು ವಿದ್ಯಾರ್ಥಿನಿ ಮತ್ತು ಯಾವುದೇ ಬಾರ್ ಅನ್ನು ನಡೆಸುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.

ಸೋನಿಯಾ ಮತ್ತು ರಾಹುಲ್ ಗಾಂಧಿ 5,000 ಕೋಟಿ ರೂಪಾಯಿ ಲೂಟಿ ಮಾಡಿದ ಬಗ್ಗೆ ಆಕೆಯ ತಾಯಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕಾಗಿ ಮತ್ತು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಹೋರಾಡಿದ್ದಕ್ಕಾಗಿ ನನ್ನ ಮಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಸ್ಮೃತಿ ಇರಾನಿ ಹೇಳಿದರು.

2024 ರಲ್ಲಿ ಮತ್ತೊಮ್ಮೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದ ಇರಾನಿ, ಮತ್ತೊಮ್ಮೆ ಮಣ್ಣು ಮುಕ್ಕಿಸುವುದಾಗಿ ಗುಡುಗಿದರು.

‘ನಾನು ನ್ಯಾಯಾಲಯ ಮತ್ತು ಜನತಾ ನ್ಯಾಯಾಲಯದಲ್ಲಿ ಉತ್ತರ ಹುಡುಕುತ್ತೇನೆ’ಎಂದು ತಮ್ಮ ಮಗಳ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಇರಾನಿ ಅವರ ಪುತ್ರಿ ಗೋವಾದಲ್ಲಿ ‘ಅಕ್ರಮ ಬಾರ್’ ನಡೆಸುತ್ತಿದ್ದಾರೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ಮೃತಿ ಇರಾನಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿತ್ತು.

ಇದು ‘ಬಹಳ ಗಂಭೀರ ವಿಷಯ’ಎಂದು ಆರೋಪಿಸಿದ್ದ ಕಾಂಗ್ರೆಸ್, ಬಾರ್‌ಗೆ ನೀಡಲಾದ ಶೋಕಾಸ್ ನೋಟಿಸ್‌ನ ಪ್ರತಿಯನ್ನು ಸಹ ಹಂಚಿಕೊಂಡಿತ್ತು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.