ADVERTISEMENT

ನರವಣೆ ಅಪ್ರಕಟಿತ ‘ಆತ್ಮಚರಿತ್ರೆ’ ವಿವಾದ: ವಿಪಕ್ಷಗಳ ಸಂಸದರಿಂದ ಪ್ರತಿಭಟನೆ

ಪಿಟಿಐ
Published 6 ಫೆಬ್ರುವರಿ 2026, 16:04 IST
Last Updated 6 ಫೆಬ್ರುವರಿ 2026, 16:04 IST
<div class="paragraphs"><p>ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಸಂಸದರು&nbsp;ಸಂಸತ್‌ ಹೊರಗೆ ಶುಕ್ರವಾರ ಪ್ರತಿಭಟನೆ ನಡೆಸಿದರು</p></div>

ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸಂಸತ್‌ ಹೊರಗೆ ಶುಕ್ರವಾರ ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ, ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ‘ಆತ್ಮಚರಿತ್ರೆ’ ಸುತ್ತಲಿನ ವಿವಾದ ಹಾಗೂ ಎಂಟು ಸಂಸದರ ಅಮಾನತು ವಿಚಾರವಾಗಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸಂಸತ್‌ ಹೊರಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ADVERTISEMENT

ಲೋಕಸಭೆ ಕಲಾಪವು ಸೋಮವಾರದವರೆಗೆ ಮುಂದೂಡಿಕೆಯಾದ ನಂತರ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಸೇರಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ನರೇಂದ್ರ ಮೋದಿ ಶರಣಾಗಿದ್ದಾರೆ’, ‘ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಿಸಿ’ ಎಂದು ಕೂಗಿದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಜೆಟ್‌ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡ ಸಂಸದರು ಮತ್ತು ಇತರ ಹಲವು ಸಂಸದರು ಭಾಗಿಯಾಗಿದ್ದರು. ಭಾರತ–ಅಮೆರಿಕ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸುವ 'ವಂಚಕ ಒಪ್ಪಂದ' ಎಂದು ಬರೆದ ದೊಡ್ಡ ಫಲಕಗಳನ್ನು ಹಿಡಿದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ಅವರ ವೈಫಲ್ಯಗಳ ಕುರಿತ ವಿಚಾರಗಳ ಬಗ್ಗೆ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಅಮಾನತುಗೊಂಡ ಸಂಸದ ಮಾಣಿಕ್ಯಂ ಠಾಗೋರ್‌ ಅವರು ಹೇಳಿದರು.

‘ಪ್ರಧಾನಿ ಮೋದಿ ಅವರು ಸಂಸತ್ತಿಗೆ ಬರಲು ಹೆದರುತ್ತಿದ್ದಾರೆ. ವಿದೇಶಗಳ ಒತ್ತಕ್ಕೆ ಮಣಿದಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.