
ನವದೆಹಲಿ: ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಳೆದ 30 ದಿನಗಳಲ್ಲಿ ದೇಶದಲ್ಲಿ ಅತಿಹೆಚ್ಚು ಲೈಕ್ ಪಡೆದ ಟಾಪ್–10 ಪೋಸ್ಟ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 8 ಪೋಸ್ಟ್‌ಗಳು ಸ್ಥಾನಪಡೆದಿವೆ.
ಎಕ್ಸ್‌ನಲ್ಲಿ ಹೊಸ ಫೀಚರ್ ಬಂದಿದ್ದು, ಒಂದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಅತಿಹೆಚ್ಚು ಲೈಕ್ ಹಾಗೂ ರಿಪೋಸ್ಟ್ ಆಗಿರುವ ಟಾಪ್–10 ಪೋಸ್ಟ್‌ಗಳು ಆ ಪಟ್ಟಿಯಲ್ಲಿ ಕಾಣುತ್ತವೆ.
ಪ್ರಧಾನಿ ಅವರು ಎಕ್ಸ್‌ನಲ್ಲಿ ಹಾಕಿರುವ 8 ಪೋಸ್ಟ್‌ಗಳು ಒಟ್ಟು 1,60,700 ಬಾರಿ ರಿಪೋಸ್ಟ್ ಆಗಿದ್ದರೆ, 14.76 ಲಕ್ಷ ಲೈಕ್ ಪಡೆದುಕೊಂಡಿವೆ.
ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಲೈಕ್ ಹಾಗೂ ರಿಪೋಸ್ಟ್ ಪಡೆದುಕೊಂಡಿರುವ ಖಾತೆಗಳ ಟಾಪ್ 10ರಲ್ಲಿ ಪ್ರಧಾನಿ ಮೋದಿ ಅವರು ಒಬ್ಬರೇ ರಾಜಕಾರಣಿಯಾಗಿದ್ದಾರೆ.
ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್‌ಗಳಲ್ಲಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರು ಕಾರಿನಲ್ಲಿ ಜತೆಯಲ್ಲಿ ಸಾಗುವಾಗ ತೆಗೆಸಿಕೊಂಡಿದ್ದ ಫೋಟೊದ ಪೋಸ್ಟ್ ಅಗ್ರಸ್ಥಾನದಲ್ಲಿದೆ. ಆ ಪೋಸ್ಟ್ 34 ಸಾವಿರ ರಿಪೋಸ್ಟ್ ಆಗಿದ್ದರೆ, 2,14,000 ಲೈಕ್ ಪಡೆದುಕೊಂಡಿದೆ.
ಪ್ರಧಾನಿ ಮೋದಿ ಅವರು ಪುಟಿನ್‌ಗೆ ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆ ನೀಡುತ್ತಿರುವ ಪೋಸ್ಟ್ 29 ಸಾವಿರ ರಿಪೋಸ್ಟ್ ಆಗಿದ್ದರೆ, 2,31,000 ಲೈಕ್ ಪಡೆದುಕೊಂಡಿದೆ.
ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಮದುವೆಗೆ ಶುಭಕೋರಿದ್ದ ಪೋಸ್ಟ್, ಪುಟಿನ್ ಅವರನ್ನು ಮೋದಿ ಸ್ವಾಗತಿಸಿದ್ದ ಪೋಸ್ಟ್, ರಾಷ್ಟ್ರಪತಿ ಭವನದಲ್ಲಿ ಮೋದಿ ಹಾಗೂ ಪುಟಿನ್ ಗೌರವ ಸ್ವೀಕರಿಸುತ್ತಿರುವ ಪೋಸ್ಟ್, ಆಯೋಧ್ಯೆಯಲ್ಲಿನ ಧರ್ಮ ಧ್ವಜಾರೋಹಣ ಉತ್ಸವದ ಪೋಸ್ಟ್, 19 ವರ್ಷದ ವೇದಾಂತಿ ದೇವವ್ರತ ಮಹೇಶ್ ರೇಖೆ ಹಾಗೂ ಭಾರತ ಮಹಿಳಾ ಅಂಧರ ತಂಡ ವಿಶ್ವಕಪ್ ಗೆದ್ದಾಗ ಅವರಿಗೆ ಅಭಿನಂದನೆ ಸಲ್ಲಿಸಿದ್ದ ಪೋಸ್ಟ್‌ಗಳು ಅತಿಹೆಚ್ಚು ಲೈಕ್ ಹಾಗೂ ರಿಪೋಸ್ಟ್ ಪಡೆದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.