ADVERTISEMENT

ಉತ್ತರ ಪ್ರದೇಶ: ರೈತ ನಾಯಕ ರಾಕೇಶ್ ಟಿಕಾಯತ್ ಕಾರಿಗೆ ಡಿಕ್ಕಿಯಾದ ನೀಲ್‍ಗಾಯ್

ಪಿಟಿಐ
Published 15 ಮಾರ್ಚ್ 2025, 6:44 IST
Last Updated 15 ಮಾರ್ಚ್ 2025, 6:44 IST
<div class="paragraphs"><p>ರೈತನಾಯಕ ರಾಕೇಶ್ ಟಿಕಾಯತ್</p></div>

ರೈತನಾಯಕ ರಾಕೇಶ್ ಟಿಕಾಯತ್

   

ಪಿಟಿಐ ಚಿತ್ರ

ಮುಜಾಫರ್‌ನಗರ: ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ರಾಷ್ಟ್ರೀಯ ವಕ್ತಾರ ಹಾಗೂ ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರ ಕಾರಿಗೆ ನೀಲ್‍ಗಾಯ್ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯ ಮೀರ್‌ಪುರ ಬೈಪಾಸ್‌ ರಸ್ತೆಯಲ್ಲಿ ತೆರಳುತ್ತಿದ್ದಾಗ ಟಿಕಾಯತ್‌ ಕಾರಿನ ಮುಂಭಾಗಕ್ಕೆ ನೀಲ್‌ಗಾಯ್‌ ಡಿಕ್ಕಿಯಾಗಿದೆ. ಈ ವೇಳೆ ಟಿಕಾಯತ್‌ ಅವರಿಗೆ ಯಾವುದೇ ಅಪಾಯವಾಗಿಲ್ಲ.

ಉತ್ತರ ಪ್ರದೇಶ ಸಚಿವ ಕಪಿಲ್‌ ದೇವ್‌ ಅಗರ್ವಾಲ್‌ ಹಾಗೂ ಮುಜಾಫರ್‌ನಗರ ಸಂಸದ ಹರೇಂದ್ರ ಸಿಂಗ್‌ ಮಲಿಕ್‌ ಅವರು ವಿಷಯ ತಿಳಿಯುತ್ತಿದ್ದಂತೆ ಟಿಕಾಯತ್‌ ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.