
ಬಾಲಘಾಟ್: ₹2.36 ಕೋಟಿ ಇನಾಮು ಘೋಷಣೆಯಾಗಿದ್ದ 10 ನಕ್ಸಲರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ದಿಂಡೋರಿ ಮತ್ತು ಮಾಂಡ್ಲಾ ಈಗ ನಕ್ಸಲ್ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತವಾಗಿವೆ. ಜನವರಿಯಿಂದ ಬಾಲಘಾಟ್‌ನಲ್ಲಿ ಸಂಪೂರ್ಣ ನಕ್ಸಲ್ ನಿರ್ಮೂಲನಾ ಅಭಿಯಾನ ಪ್ರಾರಂಭವಾಗಲಿದೆ. ಮುಖ್ಯವಾಹಿನಿಗೆ ಮರಳುವವರಿಗೆ 15 ವರ್ಷಗಳ ಕಾಲ ಪುನರ್ವಸತಿ ಪ್ಯಾಕೇಜ್ ಸಿಗುತ್ತದೆ. ಆದರೆ, ಹಾಗೆ ಮಾಡದವರ ವಿರುದ್ಧ ಕಠಿಣ ಕ್ರಮ ಮುಂದುವರಿಯುತ್ತದೆ’ ಎಂದು ಯಾದವ್ ಹೇಳಿದ್ದಾರೆ.
ಇದೇ ವೇಳೆ ಯಾದವ್ ಅವರು ಶರಣಾದ ನಕ್ಸಲರಿಗೆ ಸಂವಿಧಾನದ ಪ್ರತಿಯನ್ನು ನೀಡುವ ಮೂಲಕ ಬರಮಾಡಿಕೊಂಡಿದ್ದಾರೆ.
ನಿಷೇಧಿತ ಮಾವೋವಾದಿ ಕಮ್ಯುನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾಗಿದ್ದ ಹತ್ತು ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾದ ನಕ್ಸಲರನ್ನು ಸುಂದರ್ ಅಲಿಯಾಸ್ ಕಬೀರ್ ಅಲಿಯಾಸ್ ಸೋಮ, ರಾಕೇಶ್ ಓಡೋ ಅಲಿಯಾಸ್ ಬಿಮಾ, ಸಮರ್ ಅಲಿಯಾಸ್ ಸಮುರು ಅಲಿಯಾಸ್ ರಾಜು, ಸತಾಲಿ ಅಲಿಯಾಸ್ ಬಲಿಸಾ ಅಲ್ತಾದ್, ವಿಕ್ರಮ್ ಅಲಿಯಾಸ್ ಹಿದ್ಮಾ , ಲಾಲ್ಸಿಂಗ್ ಮಾಧವಿ ಅಲಿಯಾಸ್ ಸೀಂಗೂ, ಶಿವರಾಮ್ ಮೂವೆ ಅಲಿಯಾಸ್ ಜೋಗ, ಜಯಂತ್ ಅಲಿಯಾಸ್ ಜೋಗಿ ಗುಡಾಪ್, ಜಯಶ್ರೀ ಅಲಿಯಾಸ್ ಲಾಲ್ತಮ್ ಮತ್ತು ನವೀನ ಮೂವೆ ಅಲಿಯಾಸ್ ಹಿದ್ಮಾ ಎಂದು ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.