ADVERTISEMENT

ಕ್ರೂಸ್ ಡ್ರಗ್ಸ್ ಪ್ರಕರಣ: ಮುಂಬೈ ತಲುಪಿದ ಎನ್‌ಸಿಬಿ ವಿಶೇಷ ತನಿಖಾ ತಂಡ

ಪಿಟಿಐ
Published 6 ನವೆಂಬರ್ 2021, 12:53 IST
Last Updated 6 ನವೆಂಬರ್ 2021, 12:53 IST
ಆರ್ಯನ್‌ ಖಾನ್‌
ಆರ್ಯನ್‌ ಖಾನ್‌   

ಮುಂಬೈ: ವಿವಾದಾತ್ಮಕ ಕ್ರೂಸ್ ಡ್ರಗ್ಸ್ ಪ್ರಕರಣ ಸೇರಿದಂತೆ ಆರು ಪ್ರಕರಣಗಳ ತನಿಖೆಯನ್ನು ವಹಿಸಿಕೊಂಡ ಒಂದು ದಿನದ ನಂತರ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶನಿವಾರ ಮುಂಬೈ ತಲುಪಿದೆ.

ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವಾಗಿದೆ. ದೆಹಲಿಯಿಂದ ಬಂದ ತಂಡವು ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ಎನ್‌ಸಿಬಿಯ ವಲಯ ಕಚೇರಿಗೆ ಭೇಟಿ ನೀಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ನೇತೃತ್ವ ವಹಿಸುವ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಸಿಂಗ್, ‘ನಾವು ಕೆಲವು ಪ್ರಕರಣಗಳನ್ನು ವಹಿಸಿಕೊಂಡಿದ್ದೇವೆ. ನಮ್ಮ ತನಿಖೆ ಪ್ರಾರಂಭಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಪ್ರಕರಣಗಳ ಮರುತನಿಖೆ ನಡೆಸುತ್ತೀರಾ ಎಂಬ ಪ್ರಶ್ನೆಗೆ, ‘ಮೊದಲು ಪ್ರಕರಣದ ದಾಖಲಾತಿ ಮತ್ತು ಇದುವರೆಗಿನ ತನಿಖೆಯ ಪ್ರಗತಿ ನೋಡಿ, ನಂತರ ನಾವು ನಿರ್ಧರಿಸುತ್ತೇವೆ. ಇದೀಗ, ಆ ಪ್ರಕರಣಗಳಲ್ಲಿ ಹೆಚ್ಚಿನ ತನಿಖೆಯನ್ನು ಮಾತ್ರ ನಡೆಸಲಾಗುವುದು’ ಎಂದು ಅವರು ಹೇಳಿದರು.

ಈ ತಂಡವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಣಾಮಗಳನ್ನು ಹೊಂದಿರುವ ಆರು ಪ್ರಕರಣಗಳನ್ನು ತನಿಖೆ ಮಾಡಲಿದೆ. ಪ್ರಕರಣಗಳ ಹಿಂದೆ, ಮುಂದಿರುವ ಸಂಪರ್ಕಗಳ ಪತ್ತೆಗೆ ಆಳವಾದ ತನಿಖೆ ನಡೆಸಲಾಗುವುದು ಎಂದು ಎನ್‌ಸಿಬಿ ಶುಕ್ರವಾರ ತಿಳಿಸಿದೆ.

ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಈ ಪ್ರಕರಣಗಳ ತನಿಖಾಧಿಕಾರಿಯಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ‘ತನಿಖೆಯಲ್ಲಿ ಅಸ್ಥಿಪಂಜರಗಳು ಉರುಳುತ್ತವೆ’ ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.