ADVERTISEMENT

ಲೋಕಸಭೆ ಚುನಾವಣೆ | ಮೊದಲ ನಾಲ್ಕು ಹಂತಗಳಲ್ಲಿ ಶೇ 67ರಷ್ಟು ಮತದಾನ: ಚುನಾವಣಾ ಆಯೋಗ

ಪಿಟಿಐ
Published 16 ಮೇ 2024, 11:32 IST
Last Updated 16 ಮೇ 2024, 11:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಭಾಗವಾಗಿ ವಿವಿಧ ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲ ನಾಲ್ಕು ಹಂತಗಳಲ್ಲಿ ನಡೆದ ಮತದಾನದ ಪ್ರಮಾಣ ಶೇಕಡಾ 66.95ರಷ್ಷಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.

ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ ಶೇ 66.14ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಮೊದಲ ಹಂತದಲ್ಲಿ ಶೇ 69.43ರಷ್ಟು ಮತದಾನವಾಗಿತ್ತು. ಏಪ್ರಿಲ್ 26 ರಂದು ನಡೆದ ಎರಡನೇ ಹಂತದಲ್ಲಿ ಶೇ 66.71ರಷ್ಟು ಮತದಾನವಾಗಿದೆ. 2019ರಲ್ಲಿ ನಡೆದ ಎರಡನೇ ಹಂತದ ಮತದಾನದ ಪ್ರಮಾಣ ಶೇ 69.64ರಷ್ಟಿತ್ತು. ಮೂರನೇ ಹಂತದಲ್ಲಿ ಶೇ 65.68 ರಷ್ಟಿದ್ದು, 2019ರ ಮೂರನೇ ಹಂತದಲ್ಲಿ ಶೇ 68.4ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು .

ADVERTISEMENT

ಮೇ 13ರಂದು ನಡೆದ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದ ಪ್ರಮಾಣವು ಶೇಕಡಾ 69.16 ರಷ್ಟಿದೆ. 2019ರ ನಡೆದ ನಾಲ್ಕನೇ ಹಂತದ ಮತದಾನದ ಪ್ರಮಾಣಕ್ಕಿಂತ ಶೇಕಡಾ 3.65ಕ್ಕೂ ಹೆಚ್ಚಾಗಿದೆ ಎಂದು ಆಯೋಗ ತಿಳಿಸಿದೆ.

ಮೊದಲ ನಾಲ್ಕು ಹಂತದ ಮತದಾನಗಳಲ್ಲಿ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಂತೆ ಒಟ್ಟು 379 ಸ್ಥಾನಗಳಿಗೆ ಮತದಾನವಾಗಿದೆ. ಸುಮಾರು 97 ಕೋಟಿ ಮತದಾರರಲ್ಲಿ 45.10 ಕೋಟಿ ಜನರು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಮುಂಬರುವ ಹಂತಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಚುನಾವಣಾ ಸಮಿತಿಯು ತಿಳಿಸಿದ್ದು, ಈ ಸಂಬಂಧ ರಾಜ್ಯ ಮುಖ್ಯಚುನಾವಣಾಧಿಕಾರಿಗಳು ಗಮನಹರಿಸುವಂತೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.