ನವದೆಹಲಿ: ತಾಂತ್ರಿಕ ಕಾರಣದಿಂದಾಗಿ ನೀಟ್ ಪರೀಕ್ಷೆಯಲ್ಲಿ ಸಮಯದ ಅಭಾವವನ್ನು ಎದುರಿಸಿರುವುದಾಗಿ ಕೆಲ ಅಭ್ಯರ್ಥಿಗಳು ಎತ್ತಿರುವ ಆಕ್ಷೇಪಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸುವಂತೆ ದೆಹಲಿ ಹೈಕೋರ್ಟ್ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ(ಎನ್‌ಟಿಎ) ನಿರ್ದೇಶನ ನೀಡಿದೆ.
‘ಇಂತಹ ಪ್ರಕರಣಗಳಲ್ಲಿ ಸಿ.ಸಿ.ಟಿ.ವಿ ಯ ಎಲ್ಲ ದೃಶ್ಯಗಳನ್ನು ನ್ಯಾಯಾಲಯ ಪರೀಕ್ಷಿಸಲು ಸಾಧ್ಯವಿಲ್ಲ. ತಜ್ಞರಿಂದ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ಪರಿಶೀಲನೆ ಮಾಡಿಸುವುದು ಅಗತ್ಯವಾಗಿರುತ್ತದೆ ಎಂದು ನ್ಯಾಯಾಮೂರ್ತಿ ವಿಕಾಸ್ ಮಹಾಜನ್ ಅವರು ಹೇಳಿದ್ದಾರೆ.
ಸೂಕ್ತವಾದ ಪರೀಕ್ಷಾ ಸೂತ್ರಗಳನ್ನು ರೂಪಿಸಲು ಸ್ಥಾಯಿ ಸಮಿತಿಗೆ ನ್ಯಾಯಾಲಯವು ಪೂರ್ಣ ಸ್ವಾತಂತ್ರ್ಯವನ್ನು ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.