ADVERTISEMENT

ವೃಂದಾವನ: ಅತಿಥಿ ಗೃಹ, ಆಶ್ರಮಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಪಿಟಿಐ
Published 3 ಡಿಸೆಂಬರ್ 2021, 2:42 IST
Last Updated 3 ಡಿಸೆಂಬರ್ 2021, 2:42 IST
ಮಥುರಾ ಕೃಷ್ಣ ಜನ್ಮಭೂಮಿ
ಮಥುರಾ ಕೃಷ್ಣ ಜನ್ಮಭೂಮಿ   

ಮಥುರಾ: ವೃಂದಾವನಕ್ಕೆ ಭೇಟಿ ನೀಡಿದ್ದ 10 ಜನ ವಿದೇಶಿಯರಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ವೃಂದಾವನದ ಎಲ್ಲ ಅತಿಥಿ ಗೃಹ ಮತ್ತು ಆಶ್ರಮಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಕೂಡ ಕೋವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ವಾರವಷ್ಟೇ 10 ವಿದೇಶಿ ಪ್ರಜೆಗಳು ಮತ್ತು ಒಡಿಶಾದ ನಿವಾಸಿಗೆ ಕೋವಿಡ್-19 ದೃಢಪಟ್ಟಿತ್ತು. 10 ಜನ ವಿದೇಶಿ ಪ್ರಜೆಗಳಲ್ಲಿ ಮೂವರು ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆಯೇ ವಾಪಸ್ ತೆರಳಿದ್ದಾರೆ.

ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಚನಾ ಗುಪ್ತಾ ಮಾತನಾಡಿ, ಅತಿಥಿ ಗೃಹ ಮತ್ತು ಆಶ್ರಮಗಳಲ್ಲಿ ತಂಗಲು ಹೊರಗಡೆಯಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷಾ ನೆಗೆಟಿವ್ ವರದಿಯನ್ನು ತರಬೇಕು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.