ADVERTISEMENT

ಚರ್ಚ್‌ ಸ್ಟ್ರೀಟ್‌ನಲ್ಲಿ ಚಹಾ ಸವಿದ ನೆದರ್ಲೆಂಡ್ ಪ್ರಧಾನಿ ಮಾರ್ಕ್‌ ರುಟ್ಟೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 12:21 IST
Last Updated 11 ಸೆಪ್ಟೆಂಬರ್ 2023, 12:21 IST
<div class="paragraphs"><p>ಬೆಂಗಳೂರಿನ ಚರ್ಚ್ ಸ್ಟ್ರೀಟ್‌ಗೆ ಸೋಮವಾರ ಭೇಟಿ ನೀಡಿದ ಮಾರ್ಕ್‌ ರುಟ್ಟೆ ಚಹಾ ಸವಿಯುತ್ತಾ ನಡೆದಾಡಿದರು</p></div>

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ಗೆ ಸೋಮವಾರ ಭೇಟಿ ನೀಡಿದ ಮಾರ್ಕ್‌ ರುಟ್ಟೆ ಚಹಾ ಸವಿಯುತ್ತಾ ನಡೆದಾಡಿದರು

   

ಬೆಂಗಳೂರು: ಜಿ– 20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿಗೆ ಬಂದಿರುವ ನೆದರ್ಲೆಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ ಸೋಮವಾರ ಮಧ್ಯಾಹ್ನ ಚರ್ಚ್‌ ಸ್ಟ್ರೀಟ್‌ಗೆ ಭೇಟಿನೀಡಿ ಚಹಾ ಸವಿದರು.

ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಚರ್ಚ್‌ ಸ್ಟ್ರೀಟ್‌ಗೆ ಆಗಮಿಸಿದ ರುಟ್ಟೆ, ಎಂ.ಜಿ. ರಸ್ತೆ ಮೆಟ್ರೊ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಇರುವ ಚಾಯ್‌ ಪಾಯಿಂಟ್‌ನಲ್ಲಿ ಚಹಾ ಖರೀದಿಸಿದರು. ಯುಪಿಐ ಮೂಲಕ ಹಣ ಪಾವತಿಸಿದ ಅವರು, ಅಲ್ಲಿಂದ ಬೇರಿ ವೃತ್ತದತ್ತ ಹೆಜ್ಜೆ ಹಾಕಿದರು.

ADVERTISEMENT

ಮಾರ್ಕ್‌ ರುಟ್ಟೆ ಅವರು ಚಾಯ್‌ ಪಾಯಿಂಟ್‌ನಿಂದ ಬೇರಿ ವೃತ್ತದವರೆಗೆ ಬೈಸಿಕಲ್‌ನಲ್ಲಿ ಬರಬೇಕಿತ್ತು. ಆದರೆ, ಸೈಕಲ್‌ ಬಿಟ್ಟು ನಡಿಗೆಯಲ್ಲೇ ಸಾಗಿದರು. ಅವರೊಂದಿಗೆ ನೆದರ್ಲೆಂಡ್‌ ಪ್ರಧಾನಿ ಸಚಿವಾಲಯದ ಅಧಿಕಾರಿಗಳು, ಬೆಂಗಳೂರಿನಲ್ಲಿರುವ ನೆದರ್ಲೆಂಡ್‌ ಕಾನ್ಸುಲ್‌ ಜನರಲ್‌ ಮತ್ತು ಅವರ ಕಚೇರಿ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಹೆಜ್ಜೆ ಹಾಕಿದರು.

ಬೇರಿ ವೃತ್ತ ತಲುಪಿದ ಬಳಿಕ ಅಲ್ಲಿ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ ಬಳಿ ಪತ್ರಕರ್ತರೊಂದಿಗೆ ಮಾತನಾಡಿದರು. ಬೆಂಗಳೂರಿನ ವೈಶಿಷ್ಟ್ಯದ ಕುರಿತೂ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.