ADVERTISEMENT

‘ಕಾಂಗ್ರೆಸ್‌ ಸೇರಬೇಕಿದ್ರೆ ಮದ್ಯಪಾನ, ಡ್ರಗ್ಸ್, ಪಕ್ಷದ ಬಹಿರಂಗ ಟೀಕೆ ನಿಷಿದ್ಧ’

ಪಿಟಿಐ
Published 24 ಅಕ್ಟೋಬರ್ 2021, 20:52 IST
Last Updated 24 ಅಕ್ಟೋಬರ್ 2021, 20:52 IST
   

ನವದೆಹಲಿ: ಹೊಸದಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯುವವರಿಗೆ ಪಕ್ಷವು ಕೆಲವು ಷರತ್ತುಗಳನ್ನು ವಿಧಿಸಿದೆ. ಅದರಂತೆ, ಪ್ರಾಥಮಿಕ ಸದಸ್ಯತ್ವ ಪಡೆಯುವವರು ಮದ್ಯಪಾನ, ಡ್ರಗ್ಸ್‌ನಿಂದ ದೂರವಿರುವುದಾಗಿಯೂ ಬಹಿರಂಗ ವೇದಿಕೆಗಳಲ್ಲಿ ಪಕ್ಷವನ್ನು ಟೀಕಿಸುವುದಿಲ್ಲವೆಂದೂ ಘೋಷಿಸಿಕೊಳ್ಳಬೇಕಾಗುತ್ತದೆ.

ಪಕ್ಷದ ಸದಸ್ಯತ್ವ ನೋಂದಣಿ ಪತ್ರದಲ್ಲಿರುವ ಪ್ರಕಾರ, ಸದಸ್ಯತ್ವ ಪಡೆಯುವವರು ಕಾನೂನು ವ್ಯಾಪ್ತಿ ಮೀರಿ ಆಸ್ತಿ ಹೊಂದಿರುವುದಿಲ್ಲವೆಂದೂ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ದೈಹಿಕ ಶ್ರಮದ ಕೆಲಸಗಳನ್ನು ಮಾಡಲೂ ಹಿಂಜರಿಯುವುದಿಲ್ಲ ಎಂದು ಘೋಷಿಸಿಕೊಳ್ಳಬೇಕಾಗುತ್ತದೆ.

ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಅರ್ಜಿ ನಮೂನೆಯನ್ನು ಸಿದ್ಧಪಡಿಸಿದ್ದು, 10 ಅಂಶಗಳ ವೈಯಕ್ತಿಕ ದೃಢೀಕರಣಗಳನ್ನು ಉಲ್ಲೇಖಿಸಿದೆ.

ADVERTISEMENT

ನವೆಂಬರ್ 1ರಿಂದ ಆರಂಭವಾಗಲಿರುವ ಸದಸ್ಯತ್ವ ಅಭಿಯಾನ ಮುಂದಿನ ವರ್ಷ ಮಾರ್ಚ್‌ ವರೆಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.