ADVERTISEMENT

ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ತೆಲಂಗಾಣಕ್ಕೆ ತಮಿಳಿಸೈ ಸೌಂದರರಾಜನ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 11:35 IST
Last Updated 1 ಸೆಪ್ಟೆಂಬರ್ 2019, 11:35 IST
ಡಾ. ತಮಿಳಿಸೈ ಸೌಂದರರಾಜನ್
ಡಾ. ತಮಿಳಿಸೈ ಸೌಂದರರಾಜನ್   

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಐದು ರಾಜ್ಯಗಳಿಗೆ ನೇಮಕ ಮಾಡಿರುವ ನೂತನ ರಾಜ್ಯಪಾಲರ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ಡಾ. ತಮಿಳಿಸೈ ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಹೊಸದಾಗಿ ರೂಪುಗೊಂಡತೆಲಂಗಾಣ ರಾಜ್ಯದ ಮೊದಲ ರಾಜ್ಯಪಾಲರಾಗಲಿದ್ದಾರೆ ತಮಿಳಿಸೈ.

ಅದೇ ವೇಳೆ ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ಮಾಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಲ್‌ರಾಜ್ಮಿಶ್ರಾ ಅವರು ಈ ಮೊದಲು ರಾಜ್ಯಪಾಲರಾಗಿದ್ದರು.

ಮಾಜಿ ಕೇಂದ್ರ ಸಚಿವ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳದ ರಾಜ್ಯಪಾಲರಾಗಿಯೂ ಭಗತ್ ಸಿಂಗ್ ಕೊಶ್‌ಯರಿ ಅವರನ್ನುಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
ರಾಜಸ್ತಾನದ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಅವರ ಸ್ಥಾನಕ್ಕೆ ಕಲ್‌ರಾಜ್ ಮಿಶ್ರಾ ಅವರನ್ನು ನೇಮಕ ಮಾಡಲಾಗುವುದು.

ADVERTISEMENT

ಹೊಸತಾಗಿ ರಾಜ್ಯಪಾಲರನ್ನು ನೇಮಕ ಮಾಡಿರುವರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ವಿದ್ಯಾ ಸಾಗರ್ ರಾವ್ ಅವರ ಐದು ವರ್ಷ ಅವಧಿ ಪೂರ್ಣಗೊಳ್ಳಲಿದ್ದು ರಾವ್ ಅವರ ಸ್ಥಾನಕ್ಕೆ ಕೊಶ್‌ಯರಿ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.