ADVERTISEMENT

ಪಾಕಿಸ್ತಾನಕ್ಕೆ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆ: ಎನ್‌ಐಎ ಮಾಜಿ ಅಧಿಕಾರಿ ಬಂಧನ

ಐಎಎನ್ಎಸ್
Published 18 ಫೆಬ್ರುವರಿ 2022, 16:07 IST
Last Updated 18 ಫೆಬ್ರುವರಿ 2022, 16:07 IST
ಎನ್‌ಐಎ
ಎನ್‌ಐಎ    

ನವದೆಹಲಿ: ಪಾಕಿಸ್ತಾನದ ಭಯೋತ್ಪಾದ ಸಂಘಟನೆ ಲಷ್ಕರ್‌–ಎ–ತೈಯಬಾಗೆ ದೇಶದ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ತನ್ನ ಸಂಸ್ಥೆಯ ಮಾಜಿ ಅಧಿಕಾರಿಯನ್ನೇ ಬಂಧಿಸಿದೆ.

ಎನ್‌ಐಎಯ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಎ.ಡಿ. ನೇಗಿ ಬಂಧಿತ ಆರೋಪಿ. ಎನ್‌ಐಎಯಲ್ಲಿ ತನಿಖಾಧಿಕಾರಿಯಾಗಿದ್ದ ಅವರು, ತಮ್ಮ ಅವಧಿಯಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಜಮ್ಮ ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದ ಲಷ್ಕರ್ ಸಂಘಟನೆಗೆ ಸೇರಿದ ಉಗ್ರನಿಗೆ ನೀಡಿದ್ದಾರೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ನೇಗಿ ಅವರನ್ನು ಈ ಹಿಂದೆ ಎನ್‌ಐಎಗೆ ನಿಯೋಜನೆ ಮಾಡಲಾಗಿತ್ತು. ಸದ್ಯ, ಅವರು ‌ಶಿಮ್ಲಾದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ADVERTISEMENT

ದಾಳಿ ವೇಳೆ ಹಿಮಾಚಲಪ್ರದೇಶದ ಅವರ ಮನೆಯನ್ನು ಸಹ ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

2011ರ ಐಪಿಎಸ್ ಬ್ಯಾಚ್‌ಗೆ ಬಡ್ತಿ ಪಡೆದಿದ್ದ ಪೊಲೀಸ್ ಅಧಿಕಾರಿ ನೇಗಿ ಅವರನ್ನು ಕಳೆದ ವರ್ಷ ನವೆಂಬರ್ 6 ರಂದು ಎನ್‌ಐಎ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.