
ಪ್ರಜಾವಾಣಿ ವಾರ್ತೆ
ಶ್ರೀನಗರ: ಭಯೋತ್ಪಾದನೆಗೆ ಹಣ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ- ಎನ್‌ಐಎ ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ಇಂದು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸುತ್ತಿದೆ.
ಕಾಶ್ಮೀರ ವಿಭಾಗದಲ್ಲಿ ಅನಂತನಾಗ್, ಪುಲ್ವಾಮಾ, ಕುಪ್ವಾರ ಮತ್ತು ಶ್ರೀನಗರದಲ್ಲಿ ಶೋಧ ನಡೆಸಲಾಗುತ್ತಿದೆ. ಜಮ್ಮು ವಿಭಾಗದಲ್ಲಿ ಪೂಂಛ್ ಮತ್ತು ಜಮ್ಮು ಜಿಲ್ಲೆಗಳಲ್ಲಿ ದಾಳಿ ನಡೆಯುತ್ತಿದೆ.
ಎನ್‌ಐಎಗೆ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಸಿಆರ್‌ಪಿಎಫ್ ನೆರವು ಒದಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.