ಚಂಡೀಗಢ: ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿ ಭಾನುವಾರ ನಿಹಾಂಗ್ (ಶಸ್ತ್ರಗಳನ್ನು ಹೊಂದಿರುವ) ಸಿಖ್ಖರ ಗುಂಪೊಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್(ಎಎಸ್‌ಐ)ನ ಕೈ ಕತ್ತಿರಿಸಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ.
‘ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ನಿಹಾಂಗ್ ಸಿಖ್ಖರ ಗುಂಪನ್ನು ಮಂಡಿ ಬೋರ್ಡ್ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ತಡೆದಿದ್ದಾರೆ. ಲಾಕ್‌ಡೌನ್ ಪಾಸ್ ತೋರಿಸುವಂತೆ ಗುಂಪಿಗೆ ಪೊಲೀಸರು ತಿಳಿಸಿದ್ದಾರೆ. ಆದರೆ, ತಪ್ಪಿಸಿಕೊಳ್ಳಲೆತ್ನಿಸಿದ ಗುಂಪು ಪೊಲೀಸರತ್ತ ವಾಹನ ನುಗ್ಗಿಸಲು ಯತ್ನಿಸಿದೆ. ನಂತರ ಪೊಲೀಸರ ಮೇಲೇ ದಾಳಿ ನಡೆಸಿದೆ,’ ಎಂದು ಪಟಿಯಾಲ ಜಿಲ್ಲಾ ಎಸ್‌ಪಿ ಮಂದೀಪ್ ಸಿಂಗ್ ಸಿದು ತಿಳಿಸಿದ್ಧಾರೆ.
‘ಘಟನೆಯಲ್ಲಿ ಎಎಸ್‌ಐ ಕೈ ಕತ್ತರಿಸಲಾಗಿದೆ. ಈ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ. ಕೈ ಕತ್ತರಿಸಲ್ಪಟ್ಟ ಪೊಲೀಸ್ ಅಧಿಕಾರಿಯನ್ನು ಹರ್ಜೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರನ್ನು ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಚಂಡೀಗಡದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ,’ ಎಂದು ಮಂದೀಪ್ ಸಿಂಗ್ ತಿಳಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಡಿಜಿಪಿ ದಿನಕರ್ ಗುಪ್ತಾ, ‘ಘಟನೆಯು ದುರದೃಷ್ಟಕರ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು,’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.