ADVERTISEMENT

ನೇತಾಜಿ ಚಿತಾಭಸ್ಮ ತರಲು ಅರ್ಚಕರಿಂದ ಅಡ್ಡಿಯಿಲ್ಲ: ಮರುಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 15:39 IST
Last Updated 23 ಜನವರಿ 2025, 15:39 IST
<div class="paragraphs"><p>ಸುಭಾಷ್‌ಚಂದ್ರ ಬೋಸ್‌</p></div>

ಸುಭಾಷ್‌ಚಂದ್ರ ಬೋಸ್‌

   

–ಪಿಟಿಐ ಚಿತ್ರ

ಕೋಲ್ಕತ್ತ: ‘ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ಚಿತಾಭಸ್ಮವನ್ನು ಟೊಕಿಯೊದ ರೆಂಕೋಜಿ ಬೌದ್ಧ ದೇವಾಲಯದಿಂದ ಭಾರತಕ್ಕೆ ತರಲು ಅಲ್ಲಿನ ಅರ್ಚಕರಿಂದ ಯಾವುದೇ ಅಡ್ಡಿಯಿಲ್ಲ. ಹೀಗಾಗಿ ಅದನ್ನು ತರಲು ಕ್ರಮ ಕೈಗೊಳ್ಳಬೇಕು’ ಎಂದು ಅವರ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮರು ಮನವಿ ಸಲ್ಲಿಸಿದ್ದಾರೆ.

ADVERTISEMENT

1945ರ ಆಗಸ್ಟ್‌ 18ರಂದು ನೇತಾಜಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.

ನೇತಾಜಿ ಅವರ 128ನೇ ಹುಟ್ಟುಹಬ್ಬದ ದಿನದಂದು ‘ಪಿಟಿಐ’ ಜೊತೆ ಮಾತನಾಡಿದ ಬೋಸ್‌ ಮೊಮ್ಮಗ ಚಂದ್ರಕುಮಾರ್ ಬೋಸ್, ‘ನೇತಾಜಿ ಚಿತಾಭಸ್ಮವನ್ನು ಮರಳಿ ತರುವ ಸಂಬಂಧ ಅವರ ಪುತ್ರಿ ಪ್ರೊ.ಅನಿತಾ ಬೋಸ್‌ ಹಾಗೂ ಕುಟುಂಬದ ಸದಸ್ಯರು ಪ್ರಧಾನಮಂತ್ರಿ ಕಾರ್ಯಾಲಯ ಹಾಗೂ ಭಾರತ ಸರ್ಕಾರಕ್ಕೆ ಹಲವು ಸಲ ಪತ್ರ ಬರೆದಿದ್ದಾರೆ. ಬೋಸ್‌ ಅವರು ದೇಶವನ್ನು ಸ್ವತಂತ್ರಗೊಳಿಸಲು ಬಯಸಿ, ಈ ಹೋರಾಟದಲ್ಲಿಯೇ ಹುತಾತ್ಮರಾದರು. ಅವರ ಚಿತಾಭಸ್ಮವನ್ನು ಜಪಾನ್‌ನಲ್ಲಿಯೇ ಇರಿಸುವುದು ಅವರ ಹೋರಾಟಕ್ಕೆ ಮಾಡುವ ಅಪಚಾರ’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾದ ಮೇಲೆ ಹಲವು ಸಲ ಜಪಾನ್‌ಗೆ ಭೇಟಿ ನೀಡಿದ್ದಾರೆ. ಆದರೂ, ರೆಂಕೋಜಿ ದೇವಾಲಯಕ್ಕೆ ಏಕೆ ಭೇಟಿ ನೀಡಲಿಲ್ಲ ಎಂದು ಕೇಳಲು ಬಯಸುತ್ತೇನೆ’ ಎಂದು ಅವರ ಸಂಬಂಧಿ ಸೂರ್ಯಕುಮಾರ್‌ ಭೋಸ್‌ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.