
ಪಿಟಿಐ
ನವದೆಹಲಿ: ಈಶಾನ್ಯ ಭಾರತದ ಪರವಾಗಿ ಧ್ವನಿ ಎತ್ತಲು ರಾಜಕೀಯ ಘಟಕವೊಂದನ್ನು ರಚಿಸುವುದಾಗಿ ಮೇಘಾಲಯ ಮುಖ್ಯಮಂತ್ರಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಕಾರ್ನಾಡ್ ಸಂಗ್ಮಾ ಸೇರಿ ವಿವಿಧ ನಾಲ್ಕು ರಾಜಕೀಯ ಪಕ್ಷಗಳ ನಾಯಕರು ಮಂಗಳವಾರ ಘೋಷಿಸಿದರು.
ಜಂಟಿ ಹೇಳಿಕೆಯು ಟಿಪ್ರಾ ಮೋಥಾದ ಪ್ರದ್ಯೋತ್ ಮಾಣಿಕ್ಯ, ಅಸ್ಸಾಂನ ಪೀಪಲ್ಸ್ ಪಾರ್ಟಿಯ ಡೇನಿಯಲ್ ಲಂಗ್‌ತ್ಸಾ ಮತ್ತು ಬಿಜೆಪಿ ವಕ್ತಾರ ಮಹೋನ್ಲುಮೊ ಕಿಕೋನ್ ಅವರ ಸಹಿಯನ್ನು ಒಳಗೊಂಡಿದೆ.
‘ಈಶಾನ್ಯ ಭಾರತದ ವಿವಿಧ ರಾಜ್ಯಗಳ ನಾಯಕರಾದ ನಾವು ಸಾಮೂಹಿಕ ಮತ್ತು ಐತಿಹಾಸಿಕ ನಿರ್ಣಯವನ್ನು ಘೋಷಿಸುತ್ತಿದ್ದೇವೆ. ಸಂಘಟಿತ ರಾಜಕೀಯ ಘಟಕವು ನಮ್ಮ ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.