ADVERTISEMENT

ಟಿಕ್‌ಟಾಕ್‌, ಹೆಲೊಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 16:56 IST
Last Updated 18 ಜುಲೈ 2019, 16:56 IST
   

ನವದೆಹಲಿ: ಚೀನಾದ ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಟಿಕ್‌ಟಾಕ್‌ ಮತ್ತು ಹೆಲೊಗಳಿಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ (ಎಸ್‌ಜೆಎಂ) ನೀಡಿದ ದೂರಿನ ಮೇರೆಗೆ ಈ ನೋಟಿಸ್‌ ನೀಡಲಾಗಿದೆ. ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಈ ತಾಣಗಳು ಬಳಕೆಯಾಗುತ್ತಿವೆ ಎಂದು ಆರೋಪಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ನೋಟಿಸ್‌ ನೀಡಿದ್ದು ಪ್ರತಿಕ್ರಿಯೆ ನೀಡಲು ಇದೇ 22ರ ಗಡುವು ಕೊಡಲಾಗಿದೆ. ಅದರೊಳಗೆ ಪ್ರತಿಕ್ರಿಯೆ ನೀಡದೇ ಇದ್ದರೆ ಈ ಆ್ಯಪ್‌ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಈ ಎರಡೂ ಆ್ಯಪ್‌ಗಳನ್ನು ದೇಶವಿರೋಧಿ ಮತ್ತು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಪ್ರಧಾನಿಯವರಿಗೆ ಎಸ್‌ಜೆಎಂ ಇತ್ತೀಚೆಗೆ ದೂರು ನೀಡಿತ್ತು. ಈ ಎರಡೂ ಆ್ಯಪ್‌ಗಳು ಚೀನಾದ ಅಂತರ್ಜಾಲ ಸಂಸ್ಥೆ ಬೈಟ್‌ಡಾನ್ಸ್‌ನ ಮಾಲೀಕತ್ವದ್ದಾಗಿದೆ.

ADVERTISEMENT

ಭಾರತವು ತಮ್ಮ ಅತ್ಯಂತ ಪ್ರಬಲ ಮಾರುಕಟ್ಟೆಯಾಗಿದ್ದು ಸರ್ಕಾರದ ಜತೆ ಸಹಕರಿಸುವುದಾಗಿಟಿಕ್‌ಟಾಕ್‌ ಮತ್ತು ಹೆಲೊ ತಾಣಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೈಬರ್‌ ಕಾನೂನು ಮತ್ತು ಇ–ಭದ್ರತೆ ವಿಭಾಗವು ಸುದೀರ್ಘ ಪ್ರಶ್ನಾವಳಿಯನ್ನು ಜಾಲತಾಣ ಸಂಸ್ಥೆಗಳಿಗೆ ಕಳುಹಿಸಿದೆ. ಆ್ಯಪ್‌ ಮೂಲಕ ಅನಧಿಕೃತ ಮಾಹಿತಿ ಹಂಚಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಅದರಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.