ADVERTISEMENT

ನೂಹ್‌ ಹಿಂಸಾಚಾರ: ಎನ್‌ಕೌಂಟರ್ ಬಳಿಕ ಇಬ್ಬರು ಶಂಕಿತ ಗಲಭೆಕೋರರ ಬಂಧನ

ಪಿಟಿಐ
Published 10 ಆಗಸ್ಟ್ 2023, 11:35 IST
Last Updated 10 ಆಗಸ್ಟ್ 2023, 11:35 IST
Arrest.
Arrest.   

ಗುರುಗ್ರಾಮ: ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಭಾಗಿಯಾಗಿದ್ದ ಇಬ್ಬರು ಶಂಕಿತ ಗಲಭೆಕೋರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನೂಹ್‌ ಜಿಲ್ಲೆಯ ತೌರು ಪ್ರದೇಶದ ಸಖೋ ಗ್ರಾಮದ ಬೆಟ್ಟದ ಬಳಿ ಬುಧವಾರ ತಡರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಆರೋಪಿಗಳ ಪೈಕಿ ಒಬ್ಬನ ಕಾಲಿಗೆ ಗುಂಡು ಹಾರಿಸಲಾಗಿದೆ. 

ಬೈಕಿನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ವೇಳೆ ಒಬ್ಬನ ಕಾಲಿಗೆ ಗುಂಡು ಹಾರಿಸಿದ ನಂತರ ಇಬ್ಬರು ಕೆಳಗೆ ಬಿದ್ದಿದ್ದಾರೆ. ಬಂಧಿತರಿಂದ ನಾಡ ಪಿಸ್ತೂಲ್, ಒಂದು ಕಾರ್ಟ್ರಿಡ್ಜ್ ಮತ್ತು ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಎನ್‌ಕೌಂಟರ್‌ ಸುಮಾರು ಒಂದು ತಾಸು ನಡೆಯಿತು.

ADVERTISEMENT

ಆರೋಪಿಗಳನ್ನು ಗ್ವಾರ್ಕಾ ಗ್ರಾಮದ ನಿವಾಸಿಗಳಾದ ಮುನ್ಫೆದ್‌ ಮತ್ತು ಸೈಕುಲ್ ಎಂದು ಗುರುತಿಸಲಾಗಿದೆ.  ಗುಂಡು ತಗುಲಿರುವ ಮುನ್ಫೆದ್‌ನನ್ನು ಚಿಕಿತ್ಸೆಗಾಗಿ ನಲ್ಹಾರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತೌರು ಡಿಎಸ್‌ಪಿ ಮುಖೇಶ್ ಕುಮಾರ್ ಹೇಳಿದ್ದಾರೆ.

ಕೋಮು ಘರ್ಷಣೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಕೆಲವರು ಅರಾವಳಿ ಬೆಟ್ಟಗಳಲ್ಲಿ ಅಡಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.