ಸ್ಮಶಾನ
Gemini AI ಚಿತ್ರ
ಭದ್ರಕ್: ಒಡಿಶಾದ ಭದ್ರಕ್ ಜಿಲ್ಲೆಯಲ್ಲಿನ ಸ್ಮಶಾನಗಳಲ್ಲಿ ಹೂಳಿರುವ ಶವಗಳು ನಾಪತ್ತೆಯಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ಕೆಲ ತಿಂಗಳುಗಳಲ್ಲಿ ಮಣಿನಾಥಪುರ ಸ್ಮಶಾನದಿಂದ ನಾಲ್ಕು ಶವಗಳನ್ನು ಹೊರಕ್ಕೆ ತೆಗೆದು ಸಾಗಿಸಲಾಗಿದೆ. ಹೀಗೆ ಪ್ರತಿ ತಿಂಗಳು ಶವಗಳು ನಾಪತ್ತೆಯಾಗುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
2017ರಿಂದ ಶವಗಳ ನಾಪತ್ತೆ ಪ್ರಕರಣ ನಡೆಯುತ್ತಲೇ ಇದೆ. ನಮ್ಮ ತಾಯಿಯ ಮೃತದೇಹ ಹೂತ ಹತ್ತು ದಿನಗಳಲ್ಲೇ ನಾಪತ್ತೆಯಾಗಿತ್ತು. ಈ ಕುರಿತು ದೂರು ನೀಡಿದ್ದೇನೆ’ ಎಂದು ಸ್ಥಳೀಯ ತಪಸ್ ಸಮಾಲ್ ಎಂಬುವವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಇನ್‌ಸ್ಟೆಕ್ಟರ್ ಕಮಲಕಂಠ ನಾಯಕ್, ‘ಘಟನೆ ಕುರಿತು ಹಲವು ದೂರುಗಳು ದಾಖಲಾಗಿವೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.