ADVERTISEMENT

ಒಡಿಶಾ | ಗದ್ದೆಯಲ್ಲಿಳಿದ ನೌಕಾಪಡೆ ಹೆಲಿಕಾಪ್ಟರ್‌: ಅಚ್ಚರಿಗೊಂಡ ಜನ

ಪಿಟಿಐ
Published 4 ಡಿಸೆಂಬರ್ 2024, 13:25 IST
Last Updated 4 ಡಿಸೆಂಬರ್ 2024, 13:25 IST
<div class="paragraphs"><p>ಭಾರತೀಯ ನೌಕಾಪಡೆ ಹೆಲಿಕಾಪ್ಟರ್‌ (ಪ್ರಾತಿನಿಧಿಕ ಚಿತ್ರ)</p></div>

ಭಾರತೀಯ ನೌಕಾಪಡೆ ಹೆಲಿಕಾಪ್ಟರ್‌ (ಪ್ರಾತಿನಿಧಿಕ ಚಿತ್ರ)

   

ಮಯೂರ್‌ಬಂಜ್: ಒಡಿಶಾದ ಮಯೂರ್‌ಬಂಜ್‌ ಜಿಲ್ಲೆಯ ಅರ್ಮದಾ ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ಭಾರತೀಯ ನೌಕಾಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ ಮಾಡಿದೆ. 

ಇದ್ದಕ್ಕಿದ್ದ ಹಾಗೆ ಗದ್ದೆಯಲ್ಲಿ ಹೆಲಿಕಾಪ್ಟರ್‌ ಬಂದಿಳಿದಿದ್ದನ್ನು ಕಂಡು ಹತ್ತಿರದಲ್ಲಿದ್ದ ಜನ, ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತರು ಅಚ್ಚರಿಗೊಂಡಿದ್ದಾರೆ.

ADVERTISEMENT

ಹೆಲಿಕಾಪ್ಟರ್‌ ಲ್ಯಾಂಡ್‌ ಆದ ಬಳಿಕ ಪೈಲಟ್‌ ಕೆಳಗಿಳಿದು ಪರಿಶೀಲನೆ ನಡೆಸಿದ್ದಾರೆ. ಅರ್ಧ ಗಂಟೆಯ ನಂತರ ಹೆಲಿಕಾಪ್ಟರ್‌ ಮತ್ತೆ ಹಾರಾಟ ನಡೆಸಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಸಣ್ಣ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿತ್ತು. ಪೈಲಟ್‌ ದೋಷವನ್ನು ಸರಿಪಡಿಸಿ ಕೊಂಡೊಯ್ದಿದ್ದಾರೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ವರುಣ್ ಗುಂಟುಪಲ್ಲಿ ಹೇಳಿರುವುದಾಗಿ ಪಿಟಿಐ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.