ಫುಲ್ಬನಿ (ಒಡಿಶಾ): ಇಬ್ಬರು ಮಹಿಳೆಯರು ಸೇರಿದಂತೆ ಛತ್ತೀಸಗಢದ ಮೂವರು ನಕ್ಸಲರು ಸೋಮವಾರ ಒಡಿಶಾದಲ್ಲಿ ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ.
ಶರಣಾದ ನಕ್ಸಲರಲ್ಲಿ ಒಬ್ಬರು ಸಿಪಿಐನ ಭಾಗವಾಗಿರುವ ಬಿಜಿಎನ್ ಹಾಗೂ ಮತ್ತಿಬ್ಬರು ನಿಷೇಧಿತ ಸಂಘಟನೆ ಕೆಕೆಬಿಎನ್ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಅವರು ಒಡಿಶಾ ಮತ್ತು ಛತ್ತೀಸಗಢದಲ್ಲಿ ನಡೆದಿದ್ದ ಹಲವಾರು ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದರು.
‘ತೀವ್ರ ಕಾರ್ಯಾಚರಣೆಯ ಫಲವಾಗಿ ಮತ್ತು ಸರ್ಕಾರಿ ಯೋಜನೆಯಿಂದ ಪ್ರಭಾವಿತರಾಗಿ ಮೂವರು ನಕ್ಸಲರು ಶರಣಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.