ADVERTISEMENT

ಒಡಿಶಾ: ಮೋದಿ ಭೇಟಿಗಾಗಿ 1500ಕಿಮೀ ನಡೆದು ಬಂದಿದ್ದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 10:47 IST
Last Updated 23 ಮಾರ್ಚ್ 2019, 10:47 IST
   

ಭುವನೇಶ್ವರ್: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವುದಕ್ಕಾಗಿ ಕಾಲ್ನಡಿಗೆಯಲ್ಲೇ 1,500 ಕಿಮೀ ಕ್ರಮಿಸಿ ದೆಹಲಿವರೆಗೆ ಬಂದಿದ್ದ ಒಡಿಶಾದ ಮುಕ್ತಿಕಾಂತ ಬಿಸ್ವಾಲ್ ಅವರಿಗೆ ಒಡಿಶಾ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿಸ್ಪರ್ಧಿಸಲುಟಿಕೆಟ್ ನೀಡಿದೆ.

ಒಡಿಶಾದಲ್ಲಿ ಶಿಲ್ಪಿಯಾಗಿರುವ ಮುಕ್ತಿಕಾಂತ್ (31) ದೆಹಲಿಗೆ ತಲುಪಲು 71 ದಿನಗಳನ್ನು ತೆಗೆದುಕೊಂಡಿದ್ದರು.

ಒಡಿಶಾದ ರೌರ್‍ಕೇಲಾದಲ್ಲಿರುವ ಇಸ್ಪಾತ್ ಜನರಲ್ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಮೋದಿಯವರು ನೀಡಿದ ಭರವಸೆಯನ್ನು ಅವರಿಗೆ ನೆನಪಿಸುವುದಕ್ಕಾಗಿ ಹೋರ್ಡಿಂಗ್ ಮತ್ತು ಭಾರತದ ಧ್ವಜವನ್ನು ಕೈಯಲ್ಲಿ ಹಿಡಿದು ಮುಕ್ತಿಕಾಂತ್ ಕಾಲ್ನಡಿಗೆಯಲ್ಲಿ ದೆಹಲಿಗೆ ಹೊರಟಿದ್ದರು.

ADVERTISEMENT

ದೆಹಲಿಗೆ ತಲುಪುವ ಮುನ್ನ ಮುಕ್ತಿಕಾಂತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಆಗ್ರಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಆದಾಗ್ಯೂ, ದೆಹಲಿಗೆ ಬಂದಿದ್ದರೂ ಮುಕ್ತಿಕಾಂತ್‍ಗೆ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.ಇದೀಗ ಅದೇ ಮುಕ್ತಿಕಾಂತ್‍ ರೌರ್ಕೇಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.